ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಕ್ತಿನಗರದ ಎಂ/ಎಸ್ ಅನಿಮಲ್ ಕೇರ್ ಟ್ರಸ್ಟ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಸಂಸ್ಥೆಯ ಜೊತೆಗೂಡಿ ಬೀದಿ ನಾಯಿಗಳ ಗಣತಿ ಕಾರ್ಯ ಆರಂಭಿಸಿದೆ.
ಜ.30ರವರೆಗೆ ನಡೆಯುವ ಮ್ಯಾಪಿಂಗ್ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಲ್ಲಿ ಇರುವ ಬೀದಿ/ಸಾಕು ನಾಯಿಗಳ ಹಾಗೂ ಸಾಕು ಬೆಕ್ಕುಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಶಕ್ತಿನಗರ ಎಂ/ಎಸ್.ಅನಿಮಲ್ ಕೇರ್ ಟ್ರಸ್ಟ್, ದೂ.ಸಂ.9845255777ನ್ನು ಸಂಪರ್ಕಿಸಬಹುದು ಎಂದು ಪಾಲಿಕೆಯ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
30/01/2025 09:36 pm