ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಮುಚ್ಚಿದ ಸಕ್ಕರೆ ಕಾರ್ಖಾನೆ, ಬೆಲ್ಲ ತಯಾರಿಕೆಗೆ ಕಬ್ಬು ಕೊರತೆ

ಬ್ರಹ್ಮಾವರ: ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ಹಲವಾರು ವರ್ಷದಿಂದ ಮುಚ್ಚಿದ್ದು, ಕಾರ್ಖಾನೆ ಹೊರವಲಯದಲ್ಲಿ ಬೆಲ್ಲ ತಯಾರಿಕಾ ಘಟಕವೊಂದು ಆರಂಭಗೊಂಡಿದೆ. ಆದ್ರೆ ಈ ವರ್ಷ ಕಬ್ಬು ಸರಬರಾಜು ಕಡಿಮೆ ಇದ್ದ ಕಾರಣ ಬೆಲ್ಲ ತಯಾರಿಕೆಯೂ ಕಡಿಮೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಹೇರೂರು ಬಳಿ ಡಿಸೆಂಬರ್ ತಿಂಗಳಿಂದ ಮಾರ್ಚ್ ತನಕ ಇಲ್ಲಿ ತಯಾರಾಗುವ ಆಲೆಮನೆ ಬೆಲ್ಲದ ತಯಾರಿಕೆಯಲ್ಲಿ ಈ ವರ್ಷ ಕಳೆದ ವರ್ಷಕ್ಕಿಂತ ಅರ್ಧದಷ್ಟು ಕಡಿಮೆ ಆಗಿದೆ. 11 ತಿಂಗಳಲ್ಲಿ ಬೆಳೆಯುವ ಕಬ್ಬು ಕ್ವಿಂಟಾಲಿಗೆ 4000 ರೂಪಾಯಿಯಲ್ಲಿ ಸ್ಥಳೀಯರಿಂದ ಖರೀದಿಸಿ ಲಾಭದಾಯಕವಾಗಿ ಮಾಡಲಾದ ಬೆಲ್ಲ ಘಟಕ, ಈ ವರ್ಷ ಸ್ಥಳೀಯ ಕೊಕ್ಕರ್ಣೆ ಭಾಗದಲ್ಲಿ ಕಟಾವು ಮಾಡಲು ಕೂಲಿ ಆಳು ಸಿಗದೆ, ಹೊರಗಿನಿಂದ ದುಬಾರಿಯಾಗಿ 7500 ಕೊಡಬೇಕಾದ ಕಾರಣ ಸ್ಥಳೀಯ ಕಬ್ಬಿನಿಂದ ವಾರದಲ್ಲಿ 3 ದಿನ ಬೆಲ್ಲ ತಯಾರು ಮಾಡಲಾಗುತ್ತದೆ.

ಕಳೆದ ವರ್ಷದ ತನಕ ಆಡಳಿತ ಮಂಡಳಿಯ ಹೊಣೆಗಾರಿಕೆಯಲ್ಲಿ 1 ಟನ್ ಕಬ್ಬಿನಿಂದ ಸರಾಸರಿ 100 ಕೆಜಿ ಬೆಲ್ಲವನ್ನು ತಯಾರಿಸಲಾಗ್ತಿತ್ತು. 9 ಮಂದಿ ಸಿಬ್ಬಂದಿಗಳ ಮೂಲಕ ಲಾಭ ದಾಯಕವಾಗಿ ನಡೆಯುತ್ತಿತ್ತು. ದಿನಕ್ಕೆ 300 ಕೆಜಿ ಬೆಲ್ಲ ತಯಾರಾಗುತ್ತಿದ್ದು, ಈ ವರ್ಷ ಉಡುಪಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಲೆಮನೆಯ ಬೆಲ್ಲ ತಯಾರಾಗುತ್ತಿದೆ.

ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ

Edited By : Suman K
Kshetra Samachara

Kshetra Samachara

29/01/2025 04:15 pm

Cinque Terre

15.82 K

Cinque Terre

0

ಸಂಬಂಧಿತ ಸುದ್ದಿ