", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/418299-1738137808-KACHERI.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ಹಲವು ಯಾತ್ರಾರ್ಥಿಗಳಿಗೆ ಗಾಯವಾಗಿದ್ದು, ಈ ಬಗ್ಗೆ ಬೆಳಗಾವಿ ಡಿಸ...Read more" } ", "keywords": "Belagavi Kumbh Mela, Crowd Control Measures, DC Office Belagavi, Mohammad Roshan, Karnataka News, Belagavi District, Kumbh Mela Safety, Crowd Management, Emergency Response,Belgaum,Government", "url": "https://publicnext.com/node" }
ಬೆಳಗಾವಿ : ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ಹಲವು ಯಾತ್ರಾರ್ಥಿಗಳಿಗೆ ಗಾಯವಾಗಿದ್ದು, ಈ ಬಗ್ಗೆ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಬೆಳಗ್ಗೆ ಕಾಲ್ತುಲಿತ ಪ್ರಕರಣ ಆಗಿದೆ. ಟ್ರಾವೆಲ್ ಏಜೆನ್ಸಿ ಮೂಲಕ 30 ಜನರ ತಂಡ ಪ್ರಯಾಣಿಸಿತ್ತು. ಈಗ ಒಬ್ಬರಿಗೊಬ್ಬರ ಸಂಪರ್ಕ ಸಿಗ್ತಿಲ್ಲ, ಇದನ್ನೇ ಮಿಸ್ಸಿಂಗ್ ಅಂತ ಹೇಳಲು ಆಗಲ್ಲ. ಘಟನೆ ನಡೆದು ಈಗ ಆರೇಳು ಗಂಟೆ ಅಷ್ಟೇ ಆಯಿತು, ಅಲ್ಲಿ ಸೇರಿರುವ ಜನರ ಸಂಖ್ಯೆ ಹೆಚ್ಚಾಗಿದೆ.
ಅಮವಾಸ್ಯೆ ಸ್ನಾನಕ್ಕೆಂದು 8 ಕೋಟಿಗೂ ಅಧಿಕ ಜನ ಸೇರುವ ಸಂದರ್ಭ ಬಂದಿದೆ. ಯಾತ್ರಾರ್ಥಿಗಳ ಪೋಷಕರು ಭಯ ಪಡುವ ಅಗತ್ಯತೆ ಇಲ್ಲ. ಉತ್ತರ ಪ್ರದೇಶದ ಜಿಲ್ಲಾಡಳಿತ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ. ವಿಶೇಷ ಡಿಸಿಗಳು, ಐಪಿಎಸ್ ಅಧಿಕಾರಿಗಳ ಸಂಪರ್ಕದಲ್ಲಿ ನಾವಿದ್ದೇವೆ.
24 ಗಂಟೆ ವೇಟ್ ಮಾಡ್ತಿವಿ, ಮಿಸ್ಸಿಂಗ್ ಆದವರ ಸಂಪರ್ಕ ಸಾಧ್ಯವಾಗಬಹುದು. ನಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ವೆಬ್‌ಸೈಟ್‌ನಲ್ಲಿ ನಮ್ಮ ನಂಬರ್ ಇದೆ, ಅಗತ್ಯತೆ ಇದ್ದವರು ಸಂಪರ್ಕಿಸಬಹುದು ಎಂದು ಹೇಳಿದರು.
PublicNext
29/01/2025 01:33 pm