", "articleSection": "Law and Order,Human Stories,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738136254-V4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಆಟೋದಲ್ಲಿ ಬಿಟ್ಟು ಹೋಗಿದ್ದ 1.50 ಲಕ್ಷ ರೂಪಾಯಿ ಹಣದ ಬ್ಯಾಗ್ನ್ನು ಮಾಲೀಕರಿಗೆ ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಸಾಕ್ಷ...Read more" } ", "keywords": ",Hubballi-Dharwad,Law-and-Order,Human-Stories,News,Public-News", "url": "https://publicnext.com/node" }
ಹುಬ್ಬಳ್ಳಿ: ಆಟೋದಲ್ಲಿ ಬಿಟ್ಟು ಹೋಗಿದ್ದ 1.50 ಲಕ್ಷ ರೂಪಾಯಿ ಹಣದ ಬ್ಯಾಗ್ನ್ನು ಮಾಲೀಕರಿಗೆ ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಸಾಕ್ಷಿಯಾಗಿದ್ದಾನೆ.
ಹೌದು... ಹುಬ್ಬಳ್ಳಿಯ ಗಣೇಶ ಹೋಟೆಲ್ನಿಂದ ಗುಜರಾತ್ ಭವನದ ಹಿಂದಗಡೆ ಆಟೋ ಮೂಲಕ ಅಮಿತಾ ರಾಯ್ಕರ್ ಅವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಆಟೋ ಚಾಲಕ ಅವರನ್ನು ಬಿಟ್ಟು, ಮತ್ತೇ ಬೇರೆ ಕಡೆ ತೆರಳಿದ್ದಾನೆ. ಆಗ ಅಮಿತಾ ಅವರು ತಮ್ಮ ಬ್ಯಾಗ್ ಮಿಸ್ ಆದ ಬಗ್ಗೆ ಗಾಬರಿಯಾಗಿ ಓಡೋಡಿ ಉಪನಗರ ಠಾಣೆಗೆ ದೂರು ನೀಡಿದ್ದಾರೆ.
ತನ್ನ ತಂದೆಯನ್ನ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಕಟ್ಟಬೇಕಾಗಿದ್ದ ಹಣದ ಬ್ಯಾಗ್ ಮಿಸ್ ಆಗಿದೆ ಎಂದು ಮಹಿಳೆ ತಿಳಿಸಿದ್ದಾರೆ. ತಕ್ಷಣವೇ ಠಾಣೆ ಪಿಎಸ್ಐ ಚೆನ್ನಬಸಪ್ಪ ಪರಿಶೀಲಿಸಿ, ಆಟೋ ಚಾಲಕ ಇರುವ ಜಾಗವನ್ನು ಪತ್ತೆಹಚ್ಚಲು ಮುಂದಾದಾಗ, ಆಟೋ ಚಾಲಕ ಸುನೀಲ್ ಕಾಂಬ್ಳೆ, ನಿಮ್ಮ ಬ್ಯಾಗ್ನ್ನು ನಿಮ್ಮ ಮನೆಗೆ ತಲುಪಿಸಿದ್ದೇನೆ ಎಂದಿದ್ದಾರೆ.
ಆಗ ಅಮಿತಾ ರಾಯ್ಕರ್ ಅವರು ಆ ಕೂಡಲೇ ಪರಿಶೀಲಿಸಿದಾಗ ಹಣದ ಸಮೇತ ಬ್ಯಾಗ್ ತಲುಪಿಸಿದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಇನ್ನು ಆಟೋ ಚಾಲಕನ ಪ್ರಾಮಾಣಿಕತೆಗೆ ಮಹಿಳೆ ಧನ್ಯವಾದ ತಿಳಿಸಿದ್ದಾರೆ. ಬಳಿಕ ಪೋಲಿಸರ ಸಮಕ್ಷಮದಲ್ಲಿ ಹಣದ ಬ್ಯಾಗ್ ಮರಳಿ ಪಡೆದುಕೊಂಡಿದ್ದಾರೆ. ಆಟೋ ಚಾಲಕ ಸುನೀಲ್ ಅವರ ಮಾನವೀಯ ಗುಣಕ್ಕೆ ಪ್ರಯಾಣಿಕರು ಹಾಗೂ ಹುಬ್ಬಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
29/01/2025 01:07 pm