", "articleSection": "Health & Fitness", "image": { "@type": "ImageObject", "url": "https://prod.cdn.publicnext.com/s3fs-public/378325-1738134903-2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ: ಪಶ್ಚಿಮಘಟ್ಟದ ಕಾಡಿನಲ್ಲಿ ಕಂಡುಬರುವ 32ಕ್ಕೂ ಅಧಿಕ ಜಾತಿಯ ಕೆಎಫ್‌ಡಿ ವೈರಸ್ ಹರಡಬಲ್ಲ ಉಣುಗುಗಳ್ಳಲಿ, ಎರಡು ಜಾತಿಯ ಉಣುಗುಗಳು ಅನುವಂ...Read more" } ", "keywords": ",Shimoga,Health-and-Fitness", "url": "https://publicnext.com/node" }
ಶಿವಮೊಗ್ಗ: ಪಶ್ಚಿಮಘಟ್ಟದ ಕಾಡಿನಲ್ಲಿ ಕಂಡುಬರುವ 32ಕ್ಕೂ ಅಧಿಕ ಜಾತಿಯ ಕೆಎಫ್‌ಡಿ ವೈರಸ್ ಹರಡಬಲ್ಲ ಉಣುಗುಗಳ್ಳಲಿ, ಎರಡು ಜಾತಿಯ ಉಣುಗುಗಳು ಅನುವಂಶಿಕವಾಗಿ ಕೆಎಫ್‌ಡಿ ವೈರಸ್ ಅನ್ನು ಮತ್ತೊಂದು ಪೀಳಿಗೆಗೆ ವರ್ಗಾಯಿಸುತ್ತಿರುವುದು ಸಂಶೋಧನೆಯಿಂದ ದೃಢಪಟ್ಟಿದೆ.
ಈ ಸಂಶೋಧನೆಯು ಕೆಎಫ್‌ಡಿ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಗೆ ಹೊಸ ದಿಕ್ಕನ್ನೇ ಸೂಚಿಸಿದೆ. ಉಣುಗು ನಿಯಂತ್ರಣವೇ ಕೆಎಫ್‌ಡಿ ನಿಯಂತ್ರಣದ ಮೊದಲ ಭಾಗವಾಗಲಿದೆ.
ಹೌದು... ಕೆಎಫ್‌ಡಿ ಕುರಿತಂತೆ ಕಳೆದ 6 ವರ್ಷದಿಂದ ರಾಜ್ಯ ಆರೋಗ್ಯ ಇಲಾಖೆಯು ಸೇರಿದಂತೆ ಐಸಿಎಂಆರ್, ಐಸಿಎಆರ್ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆ ನಡೆಸುತ್ತಿರುವ "ಮಂಕಿ ಫಿವರ್ ರಿಸ್ಕ್" ತಂಡ ಉಣುಗುಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬಂದಿದೆ.
ಕೆಎಫ್‌ಡಿ ವೈರಸ್ ಪತ್ತೆಯಾಗಿ 60 ವರ್ಷವಾಗಿದ್ದರೂ ಅದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಆಗಿರಲಿಲ್ಲ. ಈಚೆಗೆ ನಡೆಯುತ್ತಿರುವ ಒಂದಷ್ಟು ಸಂಶೋಧನೆಗಳು ಕೆಎಫ್‌ಡಿ ನಿರ್ಮೂಲನೆಯತ್ತ ಮಹತ್ವದ ಹೆಜ್ಜೆ ಇಟ್ಟಿವೆ. ಈ ಪ್ರಾಣಿಗಳನ್ನು ಕಚ್ಚಿದ ಉಣುಗುಗಳಿಗೆ ವೈರಸ್ ತಗುಲಿ, ಈ ಉಣುಗುಗಳು ಮನುಷ್ಯರಿಗೆ ಕಚ್ಚಿ ಕೆಎಫ್‌ಡಿ ಬರುತ್ತಿತ್ತು ಎಂದು ಅಂದಾಜಿಸಲಾಗಿತ್ತು. ಈಗಿನ ಸಂಶೋಧನೆಯು ಹೊಸ ಬೆಳಕು ಚೆಲ್ಲಿದೆ.
ಮಲೆನಾಡಿನ ಕಾಡುಗಳಲ್ಲಿ ಕಂಡುಬರುವ ಹೆಮಾಫಿಸಾಲಿಸ್ ಮತ್ತು ರೈಪಿಸೆಫಾಲಸ್ ಹೆಸರಿನ ಎರೆಡು ಜಾತಿಯ ಉಣುಗು ಮಾತ್ರ ವೈರಸ್ ಅನ್ನು ತನ್ನ ಮಕ್ಕಳಿಗೂ ವರ್ಗಾಯಿಸುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ಉಳಿದ ಜಾತಿಯ ಉಣುಗುಗಳ ಮೇಲೆ ಸಂಶೋಧನೆ ಮುಂದುವರೆದಿದೆ.
ಉಣುಗುಗಳ ಪ್ರಮಾಣ ಎಷ್ಟಿದೆ, ಉಣುಗು ಬಾಲ್ಯ, ಯೌವನ, ಪ್ರೌಢವಾಸ್ಥೆಯಲ್ಲಿ ಇದೆಯೇ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ಕೆಲವು ಉಣುಗುಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಉಣುಗು ಪಾಸಿಟಿವ್ ಬಂದರೆ ಆ ಭಾಗದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗುತ್ತದೆ.
ಒಟ್ಟಾರೆ, 2019ರಲ್ಲಿ ಕೆಎಫ್‌ಡಿ ಸ್ಫೋಟಗೊಂಡಾಗ ದನಕರುಗಳು ಮೇಲಿನ ಉಣುಗುಗಳು ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕಿದೆ.
ವೀರೇಶ್ ಜಿ ಹೊಸೂರ್, ಪಬ್ಲಿಕ್ ನೆಕ್ಸ್ಟ್, ಶಿವಮೊಗ್ಗ
PublicNext
29/01/2025 12:45 pm