", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/418299-1738123038-TUKKU.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shekar Kittur" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚನ್ನಮ್ಮನ ಕಿತ್ತೂರು : ವೃಕ್ಷ ಉದ್ಯಾನದಲ್ಲಿ ಅಳವಡಿಸಲು ತಂದು ಕಿತ್ತೂರಿನ ಉಪವಲಯ ಅರಣ್ಯ ಇಲಾಖೆ ಆವರಣದಲ್ಲಿ ಗುಂಪೆ ಹಾಕಿರುವ ವಿವಿಧ ಆಟಿಕೆ ವಸ್ತ...Read more" } ", "keywords": "Kittur Chennamma, Kittur Utsav, Karnataka Tourism, Kittur Garden, Play Equipment, Public Park, Karnataka News, Belgaum District, Heritage Sites, Tourist Attractions.,Belgaum,Infrastructure,Government", "url": "https://publicnext.com/node" } ಚನ್ನಮ್ಮನ ಕಿತ್ತೂರು : ಉದ್ಯಾನದ ಆಟಿಕೆಗಳಿಗೆ ತುಕ್ಕು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಮ್ಮನ ಕಿತ್ತೂರು : ಉದ್ಯಾನದ ಆಟಿಕೆಗಳಿಗೆ ತುಕ್ಕು

ಚನ್ನಮ್ಮನ ಕಿತ್ತೂರು : ವೃಕ್ಷ ಉದ್ಯಾನದಲ್ಲಿ ಅಳವಡಿಸಲು ತಂದು ಕಿತ್ತೂರಿನ ಉಪವಲಯ ಅರಣ್ಯ ಇಲಾಖೆ ಆವರಣದಲ್ಲಿ ಗುಂಪೆ ಹಾಕಿರುವ ವಿವಿಧ ಆಟಿಕೆ ವಸ್ತುಗಳು ತುಕ್ಕು ಹಿಡಿಯುತ್ತಿದ್ದು, ಮಣ್ಣಿನೊಂದಿಗೆ ಮೈತ್ರಿ ಮಾಡಿಕೊಂಡು ಹಾಳಾಗುತ್ತಿವೆ ಹೊರಟಿವೆ.

ಕಿತ್ತೂರು ತಾಲ್ಲೂಕಿನ ಗಿರಿಯಾಲ ವೃಕ್ಷ ಉದ್ಯಾನವನ ಅಥವಾ ರಾಷ್ಟ್ರೀಯ ಹೆದ್ದಾರಿ ಬದಿಗಿರುವ ಚನ್ನಮ್ಮನ ಕಿತ್ತೂರಿನ ತುಂಬುಗೆರೆ ದಂಡೆಗುಂಟ ಅಭಿವೃದ್ಧಿ ಪಡಿಸುತ್ತಿರುವ ಉದ್ಯಾನಕ್ಕೆ ಈ ವಸ್ತುಗಳನ್ನು ತಂದಿರಬಹುದು ಎಂಬುದು ಸಾರ್ವಜನಿಕರ ಅನಿಸಿಕೆ.

ಇವುಗಳು ಅರಣ್ಯ ಇಲಾಖೆಯ ಆವರಣದಲ್ಲಿ ಇರಲಿ ಎಂದು ಹಿರಿಯ ಅಧಿಕಾರಿಗಳು ಈ ವಸ್ತುಗಳನ್ನು ತಂದು ಗುಡ್ಡೆ ಹಾಕಿದರು. ಇವುಗಳನ್ನು ಎಲ್ಲಿ ಅಳವಡಿಸುತ್ತಾರೆ ಎಂಬುದರ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿ ಮಾಹಿತಿ ಇಲ್ಲ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರಬಹುದು ಎನ್ನುತ್ತೇವೆ ಇಲ್ಲಿನ ಉಪವಲಯ ಅರಣ್ಯ ಇಲಾಖೆ ಮೂಲಗಳು.

ಸುಮಾರು ಲಕ್ಷಕ್ಕೂ ಹೆಚ್ಚು ಹಣ ವೆಚ್ಚ ಮಾಡಿ ತಂದಿರುವ ಈ ಆಟಿಕೆ ವಸ್ತುಗಳು ಉಪಯೋಗವಾಗಬೇಕು. ಇದ್ದಲ್ಲಿಯೇ ಬಿದ್ದು ಹಾಳಾಗಿ ಹೋಗಬಾರದು. ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಶೇಖರ ಕಲ್ಲೂರು, ಪಬ್ಲಿಕ್ ನೆಕ್ಸ್ಟ್ ಚನ್ನಮ್ಮನ ಕಿತ್ತೂರು

Edited By : Ashok M
PublicNext

PublicNext

29/01/2025 09:27 am

Cinque Terre

26.05 K

Cinque Terre

0

ಸಂಬಂಧಿತ ಸುದ್ದಿ