", "articleSection": "Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/405356-1738050567-vaii.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಣಂತಿ ಅಂಜಲಿ ಪಾಟೀಲ್ ಆಮ್ನಿಯೋಟಿಕ್ ಫ್ಲೂಯಿಡ್ ಎಂಬಾಲಿಸಂ ಆಗಿ ಸಾವನ್ನಪ್ಪಿರಬಹುದು...Read more" } ", "keywords": "Belagavi, Bananti Death Case, BIMS Director, Karnataka Crime News, Belagavi News, Medical Negligence, Hospital Administration, Karnataka Health Department, Indian Medical System, Belagavi Medical Scandal, BIMS Hospital Belagavi,Belgaum,Health-and-Fitness,Government", "url": "https://publicnext.com/node" }
ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಾಣಂತಿ ಅಂಜಲಿ ಪಾಟೀಲ್ ಆಮ್ನಿಯೋಟಿಕ್ ಫ್ಲೂಯಿಡ್ ಎಂಬಾಲಿಸಂ ಆಗಿ ಸಾವನ್ನಪ್ಪಿರಬಹುದು ಎಂದು ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಬಿಮ್ಸ್ ಆಸ್ಪತ್ರೆಯ ಶವಾಗಾರದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 40 ವಾರ ತುಂಬಿದ ಗರ್ಭಿಣಿ ಬಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಹೆರಿಗೆ ತಜ್ಞರು ಪರಿಶೀಲಿಸಿದಾಗ ಹೈ ರಿಸ್ಕ್ ಪ್ರೆಗ್ನೆನ್ಸಿ ಅಂತ ಗೊತ್ತಾಗಿದೆ. ತಕ್ಷಣವೇ ಸಿಜೇರಿಯನ್ ಮಾಡಲು ಆಪರೇಷನ್ ಥೇಟರ್‌ಗೆ ಕರೆದೊಯ್ಯಲಾಗಿದೆ. ಆಗ ದಿಢೀರ್ ಅಂಜಲಿ ಪಾಟೀಲ್ ಗೆ ಪಿಟ್ಸ್ ಬರುತ್ತದೆ, ರಕ್ತ ದೊತ್ತಡ ಕಡಿಮೆ ಆಗುತ್ತದೆ. ಆಮ್ನಿಯೋಟಿಕ್ ಫ್ಲೂಯಿಡ್ ಎಂಬಾಲಿಸಂ ಆಗಿರಬಹುದು ಎಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ಅಂಜಲಿ ಪಾಟೀಲ ಸಾವಾಗಿದೆ. ವೈದ್ಯರ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದರು.
ವರ್ಷಕ್ಕೆ 10 ಸಾವಿರ ಹೆರಿಗೆ ಆದ್ರೆ ಶೇ. 40 ರಷ್ಟು ಸಿಜೇರಿಯನ್ ಆಗುತ್ತವೆ.. ಪಿಎಚ್‌ಸಿಗಳಿಂದ ಬಹುತೇಕ ಹೈರಿಸ್ಕ್ ಪೇಷೆಂಟ್‌ಗಳು ಇಲ್ಲಿಗೆ ಬರುತ್ತಾರೆ. ಆಮ್ನಿಯೋಟಿಕ್ ಫ್ಲೂಯಿಡ್ ಎಂಬಾಲಿಸಂ ಕಂಡು ಬಂದಾಗ ಕೆಲ ಸಲ ಬದುಕಿಸಲು ಆಗಲ್ಲ ಎಂದು ಹೇಳಿದರು.
PublicNext
28/01/2025 01:21 pm