", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1737619158-2.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾಪು: ಸದಾ ಹಿಂದೂ ಮುಸ್ಲಿಂ ಎಂದು ಬದುಕುತ್ತಿರುವ ಕರಾವಳಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಸೇರಿ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿ...Read more" } ", "keywords": "Kaup News, Hindu Woman Funeral, Muslim Community Help, Communal Harmony, Interfaith Unity, Karnataka News, Indian Secularism, Social Harmony, Community Service, Humanity Above Religion.,Udupi,Mangalore,Human-Stories", "url": "https://publicnext.com/node" }
ಕಾಪು: ಸದಾ ಹಿಂದೂ ಮುಸ್ಲಿಂ ಎಂದು ಬದುಕುತ್ತಿರುವ ಕರಾವಳಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಸೇರಿ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ. ಕಳೆದ 75 ವರ್ಷಗಳಿಂದ ಮುಸ್ಲಿಂ ಕುಟುಂಬದೊಂದಿಗೆ ಸಹಬಾಳ್ವೆ ನಡೆಸಿ ಮರಣ ಹೊಂದಿದ ಉದ್ಯಾವರ ಮೂಲದ ಜಾನಕಿ ಪೂಜಾರಿ (90) ಅವರ ಅಂತ್ಯ ಸಂಸ್ಕಾರವನ್ನು ಕಾಪು ಮಲ್ಲಾರಿನ ಮುಸ್ಲಿಮರು ಸೇರಿ ನೆರವೇರಿಸಿದ್ದಾರೆ.
ಜಾನಕಿ ಪತಿ ಹಾಗೂ ಅವರನ್ನು ಸಲಹುತ್ತಿದ್ದ ರಫೀಕ್ ತಂದೆ ಗೆಳೆಯರಾಗಿದ್ದರು. ಪತಿ ಅಗಲಿಕೆ ಬಳಿಕ ಜಾನಕಿಯವರು ರಫೀಕ್ ತಾಯಿಯ ಜೊತೆಗೆ ಮುಂಬಯಿಯಲ್ಲಿ ಅವರ ಮನೆಯಲ್ಲಿಯೇ ವಾಸವಾಗಿದ್ದರು. ಅಲ್ಲಿ ಅಡುಗೆ ಕೆಲಸ ಮಾಡಿಕೊಂಡು ಕುಟುಂಬ ಸದಸ್ಯೆಯಾಗಿಯೇ ಬದುಕು ಸಾಗಿಸಿದ್ದರು. ಅವತ್ತಿನಿಂದಲೂ ಕುಟುಂಬದವರು ಜಾನಕಿ ಸಂಪರ್ಕದಲ್ಲಿರಲಿಲ್ಲ.
ರಫೀಕ್ ಕುಟುಂಬ 1980ರಲ್ಲಿ ಮುಂಬಯಿ ತ್ಯಜಿಸಿ ಉಡುಪಿಯಲ್ಲಿ ಅನಂತರ ಮಲ್ಲಾರು ಗರಡಿ ವಾರ್ಡ್‌ನಲ್ಲಿ ಮನೆ ಖರೀದಿಸಿತ್ತು. ಬಳಿಕವೂ ಅಂತಿಮ ದಿನದವರೆಗೂ ರಫೀಕ್ ಅವರೊಂದಿಗೇ ಬದುಕು ಸಾಗಿಸಿದರು. ಬಾಲ್ಯದಲ್ಲಿ ಮಗನಂತೆ ಸಲಹಿದ್ದ ಜಾನಕಿ ಅವರನ್ನು ವೃದ್ಧಾಪ್ಯದಲ್ಲಿ ರಫೀಕ್ ಕುಟುಂಬವೂ ಚೆನ್ನಾಗಿ ನೋಡಿಕೊಂಡಿತ್ತು. ಜಾನಕಿ ಮೃತಪಟ್ಟು ಅವರ ಅಂತಿಮ ದರ್ಶನಕ್ಕೆ ಪುತ್ರ ಮತ್ತು ಮೊಮ್ಮಗಳು ಆಗಮಿಸಿದ್ದರು. ರಫೀಕ್ ಕುಟುಂಬ ಹಿಂದೂಗಳ ಜೊತೆ ಸೇರಿ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ಪೂರೈಸಿ ಕಾಪುವಿನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
Kshetra Samachara
23/01/2025 01:29 pm