ಮಣಿಪಾಲ: ಹೆತ್ತವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ತಡರಾತ್ರಿ ಅನಾರೋಗ್ಯದಿಂದ ಗಂಭೀರ ಸ್ಥಿತಿ ಎದುರಾಗಿದ್ದು, ತಕ್ಷಣ ಮಗುವನ್ನು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.
ಕೇರಳ ರಾಜ್ಯದ ಆಲಪ್ಪಿಯ ದಂಪತಿ, ಮಗುವಿನೊಂದಿಗೆ ನೇತ್ರಾವತಿ ಏಕ್ಸ್‌ಪ್ರೆಸ್ ರೈಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಇಂದ್ರಾಳಿಯ ರೈಲು ನಿಲುಗಡೆ ಬಂದಾಗ ರಾತ್ರಿ 12 ಗಂಟೆ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ ಲಕ್ಷಣಗಳು ಕಂಡುಬಂದವು. ಈ ಸಂದರ್ಭದಲ್ಲಿ ದಂಪತಿ ಅಸಹಾಯಕರಾಗಿದ್ದರು. ನೆರವಿಗೆ ಬಂದ ನಿಲ್ದಾಣ ನಿಯಂತ್ರಕರು, ಮಗುವಿನ ರಕ್ಷಣೆಗೆ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಮಗು ಅಪಾಯದಿಂದ ಪಾರಾಗಿದ್ದಾಗಿ ತಿಳಿದುಬಂದಿದೆ.
PublicNext
04/02/2025 03:28 pm