ವಿಜಯನಗರ : ಸಾಲಕ್ಕಾಗಿ ಪ್ರಿಯಾಂಕ ಸಹಕಾರಿ ಪತ್ತಿನ ಸಂಘಕ್ಕೆ ಅಡ್ವಾನ್ಸ್ ಹಣ ಕಟ್ಟಿ ಆರು ತಿಂಗಳು ಕಳೆದ್ರೂ ಸಾಲ ವಾಪಾಸ್ ಬಾರದೇ ನೂರಾರು ಮಹಿಳೆಯರು ಪರದಾಡ್ತಿರೋ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮೇನ್ ಬಜಾರಲ್ಲಿ ನಡೆದಿದೆ.
ಒಂದೊಂದು ಗುಂಪಿನಲ್ಲಿ 10 ಜನ ಮಹಿಳಾ ಸದಸ್ಯರ ಪೈಕಿ ಒಬ್ಬರಿಂದ 7 ಸಾವಿರದಂತೆ ಹತ್ತು ಜನರಿಂದ 70 ಸಾವಿರ ಸಹಕಾರಿ ಪತ್ತಿನ ಸಂಘ ಅಡ್ವಾನ್ಸ್ ಆಗಿ ಪಡೆದಿದೆ. ಇದರಂತೆ 40ಕ್ಕೂ ಅಧಿಕ ಗುಂಪುಗಳನ್ನಾಗಿ ರಚನೆ ಮಾಡೋದ್ರ ಜೊತೆಗೆ ಗುಂಪಿನ ಪ್ರತಿ ಸದಸ್ಯರಿಂದಲೂ ಅಡ್ವಾನ್ಸ್ ಹಣ ಕೂಡಾ ಪಡೆದಿದೆ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮ ಒಂದರಲ್ಲೇ 20 ಸದಸ್ಯರು ಇರೋ ಎರಡು ಸಂಘಗಳಿವೆ.
ಆದ್ರೀಗ ಅಡ್ವಾನ್ಸ್ ಹಣ ಪಡೆದು ಆರೇಳು ತಿಂಗಳು ಕಳೆದ್ರೂ ಅತ್ತ ಅಡ್ವಾನ್ಸ್ ಕಟ್ಟಿದ ಹಣವೂ ಇಲ್ಲ. ಅತ್ತ ಲೋನ್ ಕೊಡುತ್ತಿಲ್ಲ ಅಂತ ಮಹಿಳಾ ಪತ್ತಿನ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷೆ ಪ್ರಿಯಾಂಕ ಜೈನ್ ವಿರುದ್ಧ ನೂರಾರು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಆರೋಪಕ್ಕೆ ಸ್ಪಷ್ಟನೆ ಕೊಟ್ಟಿರೋ ಅಧ್ಯಕ್ಷೆ ಪ್ರಿಯಾಂಕ ಜೈನ್, ಸಾಲ ಕೊಡ್ತೀವಿ ಅಂತಾ ಹಣ ಪಡೆದಿದ್ದು ಸತ್ಯ.
ಆದ್ರೆ ನಮ್ಮಿಂದ ಈ ಮುಂಚೆ ಸಾಲ ಪಡೆದ ಕೆಲ ಸಂಘಗಳ ಮಹಿಳಾ ಸದಸ್ಯರು ವಾಪಸ್ ಕಟ್ಟಿಲ್ಲ. ಹೀಗಾಗಿ ಬಿಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲ ಕಟ್ಟೋದಕ್ಕೆ ಆಗಿಲ್ಲ. ಆದ್ರೆ, ಈಗ ನಮ್ಮ ಸಂಘಕ್ಕೆ ಅಡ್ವಾನ್ಸ್ ಕಟ್ಟಿದ ಎಲ್ಲರಿಗೂ 10 ದಿನದಲ್ಲಿ ಹಣ ವಾಪಸ್ ಕೊಡ್ತೀವಿ ಅಂತ ಪ್ರಿಯಾಂಕ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷೆ ಪ್ರಿಯಾಂಕ ಜೈನ್ ಹೇಳಿದ್ದಾರೆ.
ತಮ್ಮ ಸಂಘದ ಮೇಲೆ ಬಂದ ಆರೋಪವನ್ನ ತೊಳೆದು ಹಾಕಬೇಕು ಅಂದ್ರೆ ಸಂಘದ ಅಧ್ಯಕ್ಷೆ ಪ್ರಿಯಾಂಕ ಜೈನ್ ಮಹಿಳೆಯರು ಕಟ್ಟಿದ ಹಣ ವಾಪಸ್ ಕೊಡ್ತಾರಾ..? ಇಲ್ವೋ..? ಅನ್ನೋದನ್ನ ಕಾದು ನೋಡಬೇಕು.
PublicNext
22/01/2025 08:14 pm