ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ - ರೋಗಿಗಳ ಪರದಾಟ

ಕಳಸ: ಕರ್ತವ್ಯ ನಿರತ ವೈದ್ಯನ ಮೇಲೆ ಮೂವರು ಸೇರಿ ಹಲ್ಲೆ ಮಾಡಿದ್ದಾರೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಮುರಳಿ ಮೇಲೆ ಧರಣೇಂದ್ರ ಜೈನ್, ಸುರೇಶ್, ಸುಹಾನ್ ಎಂಬುವವರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆ ತಡೆಯಲು ಬಂದ ಮಹಿಳಾ ನೌಕರರ ಮೇಲೂ ಹಲ್ಲೆ ಯತ್ನ ನಡೆಸಲಾಗಿದೆ ಎಂದು ವೈದ್ಯ ಮುರುಳಿ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯಿಂದ ಆಘಾತಗೊಂಡಿರುವ ವೈದ್ಯ ಮುರುಳಿ ನನಗೆ ಈ ಕೆಲಸವೇ ಬೇಡ ರಾಜೀನಾಮೆ ಕೊಡ್ತೀನಿ ಅಂತ ಕರ್ತವ್ಯಕ್ಕೆ ಗೈರಾಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಹಿನ್ನೆಲೆ ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆ ಮುಂದೆ ಕಾದು ಕೂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಜನರು ಪರದಾಡುತ್ತಿದ್ದರು. 10 ತಿಂಗಳಿಂದ ವೈದ್ಯ ಮುರುಳಿ ಕಳಸ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ವೈದ್ಯರು ಮಾಡದ ತಪ್ಪಿಗೆ ರೋಗಿಗಳು ಶಿಕ್ಷೆ ಅನುಭವಿಸುವಂತಾಗಿದೆ.

Edited By : Ashok M
PublicNext

PublicNext

20/01/2025 05:00 pm

Cinque Terre

28.52 K

Cinque Terre

0

ಸಂಬಂಧಿತ ಸುದ್ದಿ