", "articleSection": "Law and Order,Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1738581751_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಚಿಕ್ಕಮಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುತ್ತಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರಕ್ಕೆ ಇಂದು ...Read more" } ", "keywords": "Node,Chikmagalur,Law-and-Order,Public-News", "url": "https://publicnext.com/node" }
ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ಚಿಕ್ಕಮಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುತ್ತಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರಕ್ಕೆ ಇಂದು ತೆರೆ ಬಿದ್ದಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಸಾರ್ವಜನಿಕರು ಪೋಲಿಸ್ ಇಲಾಖೆಯಿಂದ ಬಂದೂಕು ತರಬೇತಿ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ನಾಗರೀಕರಿಗೆ ಬಂದೂಕು ತರಬೇತಿ ನೀಡುವ ಜೊತೆಗೆ ಅವರ ಕುಂದು ಕೊರತೆಗಳನ್ನು ಸಹ ಆಲಿಸಲಾಗಿದೆ.
ಬಂದೂಕು ಪರವಾನಗಿ ಕುಟುಂಬದ ಮುಖ್ಯಸ್ಥರಿಂದ ಮತ್ತೊಬ್ಬ ಸದಸ್ಯರಿಗೆ ವರ್ಗಾವಣೆಯಾಗ ಬೇಕಾದರೆ ನಾಗರಿಕ ಬಂದೂಕು ತರಬೇತಿ ಕಡ್ಡಾಯವಾಗಿರುತ್ತದೆ. 2ಸಾವಿರಕ್ಕೂ ಹೆಚ್ಚು ಜನ ಬಂದೂಕು ತರಬೇತಿಗೆ ಅರ್ಜಿ ಸಲ್ಲಿಸಿದ್ದು ಇದರಲ್ಲಿ ಮೊದಲನೆಯ ಹಂತದಲ್ಲಿ 500 ಮಂದಿಗೆ ತರಬೇತಿ ನೀಡಲಾಗಿದೆ. ಇದರ ಜೊತೆಗೆ ಕಾನೂನಿನ ಅರಿವನ್ನು ಮೂಡಿಸಿ ಬಂದೂಕನ್ನು ಎಚ್ಚರಿಕೆಯಿಂದ ಬಳಕೆ ಮಾಡುವಂತೆ ತಿಳುವಳಿಕೆ ನೀಡಲಾಗಿದೆ ಎಂದರು.
Kshetra Samachara
03/02/2025 04:52 pm