ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೂರು: ಸರಪಳಿ ಕೆಂಚರಾಯ ಸ್ವಾಮಿಗೆ ಬಲಿ ನೀಡಿದ ಕುರಿಯ ರಕ್ತ ಕುಡಿದ ಪೂಜಾರಿ!

ಕಡೂರು: ಜಾತ್ರೆಗಳಲ್ಲಿ ಪ್ರಾಣಿ ವಧೆ ನಿಷೇಧವಿದ್ದರೂ ಸಖರಾಯಪಟ್ಟಣದ ಶಕುನ ರಂಗನಾಥಸ್ವಾಮಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದಿದೆ! ಕಡೂರು ತಾಲೂಕಿನ ಶಕುನ ರಂಗನಾಥಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸರಪಳಿ ಕೆಂಚರಾಯಸ್ವಾಮಿಗೆ ಭಕ್ತರು ಕುರಿ ಮತ್ತಿತರ ಪ್ರಾಣಿಗಳ ಕತ್ತು ಕುಯ್ದು ಬಲಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪೂಜಾರಿಯೋರ್ವರು ಹರಕೆ ನೀಡಿದ ಕುರಿಗಳನ್ನು ಬಾಯಿಯಲ್ಲಿ ಕಚ್ಚಿ ರಕ್ತ ಕುಡಿದಿದ್ದನ್ನು ಕಂಡ ಜನರು, ದೇವರೇ ಇವರ ಮೈ ಮೇಲೆ ಬಂದು ಪ್ರಾಣಿ ಬಲಿ ಪಡೆಯುತ್ತಾನೆಂದು ಮಾತನಾಡಿಕೊಂಡಿದ್ದಾರೆ. ಜಾತ್ರೆಗಳಲ್ಲಿ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳು ಪಾಲನೆಯಾಗದಿರುವುದು ದುರ್ದೈವವೇ ಸರಿ.

Edited By : Ashok M
PublicNext

PublicNext

19/01/2025 08:43 am

Cinque Terre

39.54 K

Cinque Terre

2

ಸಂಬಂಧಿತ ಸುದ್ದಿ