ಕಡೂರು: ಇತಿಹಾಸ ಪ್ರಸಿದ್ಧ ಪಟ್ಟಣದ ಶ್ರೀಶಕುನ ರಂಗನಾಥಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಪಂಚಾಮತ ಅಭಿಷೇಕದೊಂದಿಗೆ ಪ್ರಾರಂಭವಾದ ಜಾತ್ರೆಯು ಮೊದಲ ದಿನ ಸ್ವಾಮಿಯು ಬೇಟೆಗೆ ರಾತ್ರಿ ಹೋಗುತ್ತಾನೆಂಬ ನಂಬಿಕೆಯಿಂದ ಸಾಂಕೇತಿಕವಾಗಿ ಹುಲಿಕೆರೆಯ ಕುರುವಿನ ಶೆಟ್ಟರ ಸಮಾಜದಿಂದ ಮೊಲ ಬಿಡುವ ಸೇವೆಯನ್ನು ನೆರವೇರಿಸಲಾಗಿತ್ತು.
ನಂತರ ದೇವರು ದೇವಾಲಯಕ್ಕೆ ಹಿಂದಿರುಗುತ್ತಾನೆ ಎಂಬ ನಂಬಿಕೆಯೊಂದಿಗೆ ಎರಡನೆಯ ದಿನ ದೇವರಿಗೆ ಹಣ್ಣು ತುಪ್ಪ ಮತ್ತು ಮಂಡೆಸೇವೆ ನಡೆಸಲಾಯಿತು. ಮೂರನೇ ದಿನ ರಂಗನಾಥ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನೆರವೇರಿದೆ.
Kshetra Samachara
18/01/2025 08:31 pm