", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/418299-1737189663-BISI.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ ಬೆನ್ನಲ್ಲೇ ನಗರ ಸಂಚಾರ ನಾಡಿ ಮೆಟ್ರೋ ದರ ಏರಿಕೆ ಕೂಡ ಫೈನಲ್ ಆಗಿದ್ದು, ದರ ಏರಿಕೆ ಸಂಬಂಧ ಬೋರ್ಡ್ ಕೂಡ ಅ...Read more" } ", "keywords": ",Bangalore,Bangalore-Rural,Government", "url": "https://publicnext.com/node" } ಬೆಂಗಳೂರು: ಬಿಎಂಟಿಸಿ ದರ ಏರಿಕೆ ಬೆನ್ನಲ್ಲೇ ನಗರವಾಸಿಗಳಿಗೆ ಮತ್ತೊಂದು ದರ ಏರಿಕೆ ಶಾಕ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿ ದರ ಏರಿಕೆ ಬೆನ್ನಲ್ಲೇ ನಗರವಾಸಿಗಳಿಗೆ ಮತ್ತೊಂದು ದರ ಏರಿಕೆ ಶಾಕ್

ಬೆಂಗಳೂರು: ಕೆಎಸ್ಆರ್ಟಿಸಿ, ಬಿಎಂಟಿಸಿ ಬೆನ್ನಲ್ಲೇ ನಗರ ಸಂಚಾರ ನಾಡಿ ಮೆಟ್ರೋ ದರ ಏರಿಕೆ ಕೂಡ ಫೈನಲ್ ಆಗಿದ್ದು, ದರ ಏರಿಕೆ ಸಂಬಂಧ ಬೋರ್ಡ್ ಕೂಡ ಅಸ್ತು ಎಂದಿದೆ...ದರ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬಿಎಂಟಿಸಿ ದರ ಏರಿಕೆ ಬಳಿಕ ಈಗ ಮೆಟ್ರೋ ದರ ಏರಿಕೆಯೂ ಫೈನಲ್ ಆಗಲಿದ್ದು, ಸದ್ಯದಲ್ಲೇ ಮೆಟ್ರೋ ಪ್ರಯಾಣಿಕರಿಗೂ ದರ ಏರಿಕೆ ಬಿಸಿ ತಟ್ಟಲಿದೆ.........

ಈ ಸಂಬಂಧ ನಿನ್ನೆ ಬಿಎಂಆರ್ಸಿಎಲ್ ಬೋರ್ಡ್ ಮಿಟೀಂಗ್ ನಡೆಯಿತು. ಬೆಂಗಳೂರಿನ ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದರ ಏರಿಕೆ ಸಮಿತಿ ಸದಸ್ಯರನ್ನ ಒಳಗೊಂಡ ತಂಡ ಬಿಎಂಆರ್ಸಿಎಲ್ ಗೆ ಎಷ್ಟು ದರ ಏರಿಕೆ ಮಾಡಬೇಕು ಅನ್ನೋ ವರದಿ ಸಲ್ಲಿಕೆ ಮಾಡಿದೆ. ದೇಶ, ವಿದೇಶಗಳ ಕೆಲ ಮೆಟ್ರೋ ದಲ್ಲಿ ದರ ಏರಿಕೆ, ಪರಿಷ್ಕರಣೆ ಕ್ರಮಗಳ ಅಧ್ಯಯನ ಮಾಡಿ ವರದಿ ಸಲ್ಲಿಕೆ ಮಾಡಿದೆ. ನಿನ್ನೆ ಬೋರ್ಡ್ ನಲ್ಲಿ ಈ ವರದಿ ಸಲ್ಲಿಕೆಯಾಗಿದ್ದು, ಅದರಂತೆ ದರ ಏರಿಕೆ ಕೂಡ ಫೈನಲ್ ಆಗಿದೆ. ಸದ್ಯ ಫೈನಲ್ ದರ ಏರಿಕೆ ಸಂಬಂಧ ಗುಟ್ಟು ಬಿಡದ ಬಿಎಂಆರ್ಸಿಎಲ್, ಇಂದು ಅಧಿಕೃತ ದರ ಪಟ್ಟಿ ಬಿಡುಗಡೆ ಮಾಡಲಿದೆ........

ಇ‌ನ್ನೂ ಸದ್ಯ ನಿನ್ನೆ ಸಭೆಯಲ್ಲಿ ತೀರ್ಮಾನ ಆದ ಬಳಿಕ ಯಾವ ನಿಲ್ದಾಣಕ್ಕೆ ಎಷ್ಟು ದರ ಅನ್ನೋದರ ಪರಿಷ್ಕೃತ ಪಟ್ಟಿ ಫೈ‌ನಲ್ ಮಾಡುವಂತೆ ಅಧಿಕಾರಿಗಳಿಗೆ ಬೋರ್ಡ್ ಸೂಚನೆ ‌ನೀಡಿದೆ. ಅದರಂತೆ ಇಂದು, ಮಧ್ಯಾಹ್ನದ ಒಳಗೆ ಸಂಪೂರ್ಣ ಪರಿಷ್ಕರಣೆ ದರ ಪಟ್ಟಿ ಸಿದ್ಧಪಡಿಸಿಲಿರುವ ಅಧಿಕಾರಿಗಳು, ಇಂದು ಮಧ್ಯಾಹ್ನ ಸುದ್ದಿ ಗೋಷ್ಟಿ ಮೂಲಕ ಅಧಿಕೃತ ದರ ಏರಿಕೆ ಬಗ್ಗೆ ಮಾಹಿತಿ ನೀಡಲಿದ್ದಾರೆ.......

ಒಟ್ಟಾರೆ ಶೀಘ್ರದಲ್ಲೇ ಮತ್ತೊಂದು ದರ ಏರಿಕೆ ಬಿಸಿ ತಟ್ಟೋದು ಕೂಡ ಫಿಕ್ಸ್ ಆಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

Edited By : Ashok M
PublicNext

PublicNext

18/01/2025 02:11 pm

Cinque Terre

20.66 K

Cinque Terre

0