ನೆಲಮಂಗಲ: ನೆಲಮಂಗಲ ತಾಲ್ಲೂಕು ಶಿವಗಂಗೆ ಬೆಟ್ಟದ ತಪ್ಪಲು ಪ್ರದೇಶ ನಾರಾಯಣಪುರ ಗ್ರಾಮದಲ್ಲಿ ನಿನ್ನೆ ಗಂಡು ಚಿರತೆ ಸೆರೆ ಸಿಕ್ಕ ಜಾಗದಲ್ಲಿಯೇ ಕಳೆದ ರಾತ್ರಿ ಮತ್ತೊಂದು ಚಿರತೆ ಪ್ರತ್ಯಕ್ಷಗೊಂಡಿದೆ.
ಅದೇ ರೀತಿ ಇಂದು ಬೆಳಿಗ್ಗೆ ತಾಲ್ಲೂಕಿನ ಅರೆಬೊಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಲ್ಕೂರು ಗ್ರಾಮದ ಬಳಿ ಚಿರತೆ ಪ್ರತ್ಯಕ್ಷಗೊಂಡು ಗ್ರಾಮಸ್ಥನ ಮೊಬೈಲ್ ನಲ್ಲಿ ಸೆರೆಯಾಗಿದೆ. ಚಿರತೆಗಳ ಉಪಟಳದಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
PublicNext
18/01/2025 08:32 am