ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾದ ಕೃತಕ ಕಾರಂಜಿ!!!

ಬೆಂಗಳೂರು: ಪೈಪ್ ಲೈನ್ ಬ್ಲಾಸ್ಟ್ ಆದ ಕಾರಣ ಬಾನೆತ್ತರಕ್ಕೆ ಕಾವೇರಿ ನೀರು ಚಿಮ್ಮಿರುವ ಘಟನೆ ವಸಂತಪುರದಲ್ಲಿ ನಡೆದಿದೆ. ನಿನ್ನೆ ಸಂಜೆ 6 ಗಂಟೆ 40 ನಿಮಿಷದ ಸುಮಾರಿಗೆ ವಸಂತಪುರದಲ್ಲಿ ಕಾವೇರಿ ಪೈಪ್ ಲೈನ್ ಲೀಕೆಜ್ ಶುರುವಾಗಿದೆ. ಕ್ಷಣಮಾತ್ರದಲ್ಲಿ ಬ್ಲಾಸ್ಟ್ ಆಗಿದ್ದು, ನೀರು ಬಾನೆತ್ತರಕ್ಕೆ ಚಿಮ್ಮಿದೆ. ನಾಲ್ಕು ಅಂತಸ್ತಿನ ಕಟ್ಟಡವನ್ನ ದಾಟಿ ಹೋದ ಕಾವೇರಿ ನೀರು, 60 ಅಡಿ ಎತ್ತರವಿದ್ದ ಬೀದಿ ಲೈಟ್ಸ್‌ಗಳಿಗೂ ಹಾನಿ ಮಾಡಿದೆ.

ಪೈಪ್‌ಲೈನ್ ಬ್ಲಾಸ್ಟ್ ಆಗಿರುವ ವಿಚಾರವನ್ನ ಕೂಡಲೇ ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಅಲರ್ಟ್ ಆದ ಅಧಿಕಾರಿಗಳು ಗೊಟ್ಟೆಗೆರೆಯಲ್ಲಿಯೇ ಕಾವೇರಿ ನೀರಿಗೆ ತಡೆವೊಡ್ಡಿದ್ದು, ಈ ಮೂಲಕ ನೀರ್ ಲೀಕೇಜ್ ಆಗದಂತೆ ನೋಡ್ಕೊಂಡಿದ್ದಾರೆ. ಆದ್ರೆ ಅರ್ಧಗಂಟೆಗಳ ಕಾಲ ಬಾನೆತ್ತೆರದಲ್ಲಿ ನೀರು ಚಿಮ್ಮುತ್ತಿದ್ರಿಂದ ಲಕ್ಷಾಂತರ ಲೀಟರ್ ನೀರ್ ಪೋಲಾಗಿರುವ ಸಾಧ್ಯತೆ ಇದೆ.

Edited By : Vinayak Patil
PublicNext

PublicNext

03/02/2025 09:05 pm

Cinque Terre

38.81 K

Cinque Terre

0

ಸಂಬಂಧಿತ ಸುದ್ದಿ