ಬೆಂಗಳೂರು: ಬೀದರ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದರೋಡೆ ಪ್ರಕರಣದ ಬಗ್ಗೆ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಒಂದಾದ ಮೇಲೊಂದು ದರೋಡೆ ಪ್ರಕರಣಗಳು ನಡೆಯುತ್ತಿದೆ. ರಾಜ್ಯ ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ರಾಜ್ಯದ ನಿಮ್ಮ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ಬ್ಯಾಂಕ್‌ಗಳ ಹಗಲು ದರೋಡೆ, ಅಮಾಯಕ ಜನರ ಕೊಲೆ ಪ್ರಕರಣಗಳು ನಡೆಯುತ್ತಿವೆ. ನೀವು ಮತ್ತು ನಿಮ್ಮ ಮಂತ್ರಿ ಮಹೋದಯರು ತಮ್ಮ ತಮ್ಮ ಕುರ್ಚಿ ಉಳಸಿಕೊಳ್ಳಲು ಡಿನ್ನರ್ ಪಾರ್ಟಿ ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.ನಿನ್ನೆ ಬೀದರ್ ನಗರದಲ್ಲಿ ಸುಮಾರು 93 ಲಕ್ಷ ಹಣ ಹಗಲು ದರೋಡೆ ನಡೆದಿದೆ. ಅದರಲ್ಲಿ ಇಬ್ಬರ ಅಮಾಯಕರ ಸಾವಾಗಿದೆ. ವಿಜಯಪುರ ನಗರದಲ್ಲಿ ದರೋಡೆ ನಡೆದಿದೆ. ಇಂದು ಸ್ವತ ಮಾನ್ಯ ಮುಖ್ಯಮಂತ್ರಿಗಳ ಮಂಗಳೂರು ಜಿಲ್ಲೆ ಪ್ರವಾಸದ ಸಂದರ್ಭದಲ್ಲಿ ಮಂಗಳೂರಿನ ಕೋಟೇಶ್ವರ ಸಹಕಾರ ಬ್ಯಾಂಕ್ ನಲ್ಲಿದ್ದ ಸುಮಾರು 10-15 ಕೋಟಿ ರೂಪಾಯಿ ಹಣ ಮತ್ತು ಬಂಗಾರವನ್ನು ಹಗಲು ದರೋಡೆ ಮಾಡಿದ್ದಾರೆ. ಇನ್ನು ಕೂಡ ಅಪಹರಣಕಾರರ ಬಂಧನವಾಗಿಲ್ಲ ಎಂದು ಕಳವಳ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೃಹ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಮಹಿಳೆಯರು ಸೇರಿದಂತೆ ಯಾರಿಗೂ ಸಹ ಸುರಕ್ಷತೆ ಇಲ್ಲವಾಗಿದೆ. ರಾಜ್ಯದ ಬ್ಯಾಂಕ್ ಗಳಿಗೆ ಸುರಕ್ಷತೆ ಇಲ್ಲವಾಗಿದೆ. ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಕೊಲೆಗಳು ನಡೆಯುತ್ತಿವೆ. ನಾಳೆ ಇನ್ನೇನಾಗುತ್ತೋ ಎನ್ನುವ ಭಯ ಮತ್ತು ಆತಂಕ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ ,ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
PublicNext
17/01/2025 08:57 pm