", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1737120032-WhatsApp-Image-2025-01-17-at-6.17.24-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳಾ ಸಮೃದ್ಧಿ ಯೋಜನೆ ಅಡಿಯಲ್...Read more" } ", "keywords": "Delhi assembly elections, BJP's manifesto promises free cylinder on Holi & Diwali, Rs 21,000 to pregnant, ,,Politics", "url": "https://publicnext.com/node" } ದೆಹಲಿ ಚುನಾವಣೆ: ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., ಗರ್ಭಿಣಿಯರಿಗೆ 21,000 ರೂ. - ಬಿಜೆಪಿ ಭರವಸೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಚುನಾವಣೆ: ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., ಗರ್ಭಿಣಿಯರಿಗೆ 21,000 ರೂ. - ಬಿಜೆಪಿ ಭರವಸೆ

ನವದೆಹಲಿ: ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 'ಮಹಿಳಾ ಸಮೃದ್ಧಿ ಯೋಜನೆ' ಅಡಿಯಲ್ಲಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಮತ್ತು ಗರ್ಭಿಣಿಯರಿಗೆ 21,000 ರೂಪಾಯಿ ಹಾಗೂ ಪೌಷ್ಠಿಕಾಂಶದ ಕಿಟ್‌ಗಳನ್ನು ನೀಡುವುದಾಗಿ ಪಕ್ಷ ಭರವಸೆ ನೀಡಿದೆ.

ಬಡ ಮಹಿಳೆಯರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 500 ರೂಪಾಯಿ ಸಬ್ಸಿಡಿ ನೀಡುವುದಾಗಿ ಬಜೆಪಿ ಭರವಸೆ ನೀಡಿದೆ. ದೆಹಲಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅದು ಹೇಳಿದೆ.

ಪ್ರತಿ 'ಜುಗ್ಗಿ ಬಸ್ತಿ ಕ್ಲಸ್ಟರ್'ನಲ್ಲಿ 5 ರೂಪಾಯಿಗೆ ಊಟ ಲಭ್ಯವಾಗುವ ಅಟಲ್ ಕ್ಯಾಂಟೀನ್ ಭರವಸೆಯನ್ನು ಬಿಜೆಪಿ ನೀಡಿದೆ. 60-70 ವರ್ಷದೊಳಗಿನ ಹಿರಿಯ ನಾಗರಿಕರಿಗೆ 2,500 ರೂಒಆಯಿ ಮಾಸಿಕ ಪಿಂಚಣಿ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3,000 ರೂಪಾಯಿ ಪಿಂಚಣಿ ನೀಡುವುದಾಗಿಯೂ ಭರವಸೆ ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲಿ 'ಆಯುಷ್ಮಾನ್ ಭಾರತ್' ಯೋಜನೆಯನ್ನು ಜಾರಿಗೆ ತರುವುದಾಗಿಯೂ ಭರವಸೆ ನೀಡಿದೆ.

Edited By : Vijay Kumar
PublicNext

PublicNext

17/01/2025 06:50 pm

Cinque Terre

18.22 K

Cinque Terre

4

ಸಂಬಂಧಿತ ಸುದ್ದಿ