", "articleSection": "Politics,Sports", "image": { "@type": "ImageObject", "url": "https://prod.cdn.publicnext.com/s3fs-public/222042-1737121397-Add-a-heading---2025-01-17T191309.687.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಪ್ರಿಯಾ ಸರೋಜ್ ಅವರನ್ನು ವಿವಾಹವಾಗುವ ಮಾತುಕತೆಯಲ್ಲಿದ್ದಾರ...Read more" } ", "keywords": "Rinku Singh, Priya Saroj, Indian cricketer, Samajwadi Party MP, engagement news, cricket marriage, politician wedding, Indian sports news, celebrity engagement. ,,Politics,Sports", "url": "https://publicnext.com/node" } ದೇಶದ ಅತ್ಯಂತ ಕಿರಿಯ ಸಂಸದೆ ಜೊತೆಗೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಅತ್ಯಂತ ಕಿರಿಯ ಸಂಸದೆ ಜೊತೆಗೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್.!

ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಪ್ರಿಯಾ ಸರೋಜ್ ಅವರನ್ನು ವಿವಾಹವಾಗುವ ಮಾತುಕತೆಯಲ್ಲಿದ್ದಾರೆ.

26 ವರ್ಷ ವಯಸ್ಸಿನ ಪ್ರಿಯಾ, 18ನೇ ಲೋಕಸಭೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಒಬ್ಬರು. ಇದೀಗ ರಿಂಕು ಸಿಂಗ್, ಉತ್ತರ ಪ್ರದೇಶದ ಮಚಲಿಶಹರ್ ಸಂಸದೆ ಪ್ರಿಯಾ ಸರೋಜಾ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಿಂಕು ಸಿಂಗ್ ಕಳೆದ ಎರಡು ವರ್ಷಗಳಿಂದ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿಯಾ ಸರೋಜ್ ತಂದೆ ಹಾಗೂ ಸಮಾಜವಾದಿ ಪಕ್ಷದ ಮಾಜಿ ಸಂಸದ ತೂಫಾನಿ ಸರೋಜ್ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎಂದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತೆ ಇಲ್ಲಿಯವರೆಗೆ ಯಾವುದೇ ನಿಶ್ಚಿತಾರ್ಥ ನಡೆದಿಲ್ಲ. ಎಂಗೇಜ್​ಮೆಂಟ್ ಆದರೆ ಅದನ್ನು ಎಲ್ಲರಿಗೂ ತಿಳಿಸಲಾಗುವುದು ಎಂದಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಮಚಲಿ ಶಹರ್‌ನಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಪ್ರಿಯಾ ಸರೋಜಾ ಸ್ಪರ್ಧಿಸಿದ್ದರು. ಪ್ರಿಯಾ ಸರೋಜಾ ಅವರ ತಂದೆ ತೂಫಾನಿ ಸರೋಜಾ ಅವರಿ 1999, 2003 ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. ಅಖಿಲೇಶ್ ಯಾದವ್ ಹಾಗೂ ತೂಫಾನಿ ಸರೋಜಾ ಅವರ ತಂತ್ರಗಾರಿಕೆಯ ಸಹಾಯದಿಂದ ಪ್ರಿಯಾ ಸರೋಜಾ, ಬಿಜೆಪಿ ಸ್ಪರ್ಧಿಯನ್ನು ಸೋಲಿಸಿ ಲೋಕಸಭಾ ಸದಸ್ಯರಾಗಿ ನೇಮಕವಾಗಿದ್ದರು. ಪ್ರಿಯಾ ಸರೋಜಾ 23 ನವೆಂಬರ್ 1998ರಲ್ಲಿ ಜನಿಸಿರುವ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Edited By : Vijay Kumar
PublicNext

PublicNext

17/01/2025 07:13 pm

Cinque Terre

12.98 K

Cinque Terre

0

ಸಂಬಂಧಿತ ಸುದ್ದಿ