ರಬಕವಿ-ಬನಹಟ್ಟಿ : ಮೌನಯೋಗಿ ಲಿಂ.ಶಂಕರಯ್ಯ ಸ್ವಾಮೀಜಿ ಅವರ ಪ್ರಥಮ ಪುಣ್ಯಸ್ಮರಣೋತ್ವವ ಅಂಗವಾಗಿ ತಾಲೂಕಿನ ಸಸಾಲಟ್ಟಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಕತೃ ಗದ್ದುಗೆಗೆ ರುದ್ರಾಭಿಷೇಕ ವಿಧಾನ ಪೂರಕವಾಗಿ ಮಹೇಶ ಹಿರೇಮಠ, ಅಡಿವೇಶ ತೆಳಗಿನಮಠ ಪೂಜಾದಿಗಳನ್ನು ನೆರವೇರಿಸಿದರು.
ಪುಣ್ಯಸ್ಮರಣೋತ್ಸವ ನಿಮಿತ್ಯ ಬೆಳಿಗ್ಗೆಯಿಂದಲೇ ಸ್ಥಳೀಯ ಶಿವಲಿಂಗೇಶ್ವರ ಮತ್ತು ಕಲ್ಮೇಶ್ವರ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು. ಮಧ್ಯಾಹ್ನ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಂತಹ ಸಾವಿರಾರು ಭಕ್ತರು ಪ್ರಸಾದವನ್ನು ಸೇವಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಚನ್ನಮಲ್ಲಪ್ಪ ಮದಲಮಟ್ಟಿ, ಜಿ.ಆರ್.ಶೇಗುಣಸಿ, ಪರಪ್ಪ ಹನಗಂಡಿ, ಪ್ರಭಾಕರ ಕಾಪಸಿ ಗುರುಬಸು ಹುಕ್ಕೇರಿ, ಶಿವಲಿಂಗ ಉಳ್ಳಾಗಡ್ಡಿ, ಭರಮಪ್ಪ ಉಳ್ಳಾಗಡ್ಡಿ, ಸುರೇಶ ಮರಡಿ, ರಾಜು ಉಳ್ಳಾಗಡ್ಡಿ, ಮುತ್ತು ಬದ್ರಶೆಟ್ಟಿ, ಅಶೋಕ ಉಳ್ಳಾಗಡ್ಡಿ, ಮಲ್ಲೇಶ ಉಳ್ಳಾಗಡ್ಡಿ ಸೇರಿದಂತೆ ಅನೇಕರಿದ್ದರು.
Kshetra Samachara
17/01/2025 04:39 pm