", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/41278820250108051244filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen rabakavi" }, "editor": { "@type": "Person", "name": "9342210542" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ: ಗುರುವಿನಲ್ಲಿ ಅನನ್ಯವಾದ ಭಕ್ತಿಯಿದ್ದರೇ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಯುವಪಿಳಿಗೆಯಲ್ಲೂ ಭಕ್ತಿಯನ್ನು ಅನುಸರಿಸುವ ಕಾರ್ಯ...Read more" } ", "keywords": "Node,Bagalkot,News,Cultural-Activity,Religion", "url": "https://publicnext.com/node" }
ರಬಕವಿ-ಬನಹಟ್ಟಿ: ಗುರುವಿನಲ್ಲಿ ಅನನ್ಯವಾದ ಭಕ್ತಿಯಿದ್ದರೇ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಯುವಪಿಳಿಗೆಯಲ್ಲೂ ಭಕ್ತಿಯನ್ನು ಅನುಸರಿಸುವ ಕಾರ್ಯ ಮನೆಮನೆಗಳಿಂದ ಆಗಬೇಕಿದೆ ಎಂದು ಮೈಂದರಗಿಯ ಅಭಿನವ ರೇವಣಸಿದ್ಧ ಪಟ್ಟದೇವರು ಹೇಳಿದರು.
ನಗರದ ಶ್ರೀ ಮದ್ವಿರಶೈವ ದೇವರದಾಸಿಮಯ್ಯ ಸಾಂಪ್ರದಾಯಕ ಹಟಗಾರ ದೈವಮಂಡಳಿ ಹಾಗೂ ಸಿದ್ದಾರೂಢ ಭಕ್ತಬಳಗದ ಆಶ್ರಯದಲ್ಲಿ ಪ.ಪೂ ರೇವಣಸಿದ್ಧ ಶಿವಶರಣರ 163ನೇ ಜಯಂತಿ ಮಹೋತ್ಸವದ ಅಂಗವಾಗಿ ಸಂಜೆ ಜರುಗಿದ ಪ್ರವಚನದಲ್ಲಿ ಮಾತನಾಡಿ, ಸಮಾಜ ಏಳ್ಗೆಗಾಗಿ ದುಡಿಯುವ ಪ್ರತಿಯೊಬ್ಬರಿಗೂ ಗುರುವಿನ ಕೃಪೆ ಸದಾ ಇರುತ್ತದೆ. ಅದರ ಮೂಲಕವೇ ಶರಣ ಸಂಸ್ಕೃತಿ ಬೆಳೆಯುತ್ತದೆ ಎಂದರು.
ಶ್ರೀಮಠದಲ್ಲಿ ಬುಧವಾರ ಬೆಳಿಗ್ಗೆ ಮಹಾರುದ್ರಾಭಿಷೇಕ, ಮಹಾತ್ಮರ ಪಾದಪೂಜೆ, ತೊಟ್ಟಿಲು ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು. ತದನಂತರ ಶ್ರೀಮಠದಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವವು ಮಂಗಲಕರವಾಗಿ ನಡೆಯಿತು. ಶ್ರೀಮಠದಲ್ಲಿ ಉಪಸ್ಥಿತ ಶ್ರೀಗಳಿಂದ ಪ್ರವಚನ ಹಾಗೂ ಮಹಾಪ್ರಸಾದ ಸೇವೆಗಳು ಅದ್ದೂರಿಯಾಗಿ ಜರುಗಿದವು. ಸಮಾಜದ ಸಮಸ್ತ ಗುರುಹಿರಿಯರು, ಮಾತೆಯರು ಭಾಗಿಯಾಗಿದ್ದರು.
Kshetra Samachara
08/01/2025 05:10 pm