", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1736164254-bgkl.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ : ಜೈನ ಧರ್ಮದ ಶ್ರೇಷ್ಟ ಪರಂಪರೆಯಲ್ಲಿ ಆಹಾರ ತ್ಯಜಿಸಿ, ಕಠಿಣ ನಿಯಮಗಳ ಮೂಲಕ ಯಮಸಲ್ಲೇಖನ ವೃತ್ತವನ್ನು ಆಚರಿಸುವುದು ಸಂಪ್ರದಾಯವಾಗ...Read more" } ", "keywords": "Bagalkot, Bhadragiri Hills, Bharatamuni Statue, Unique Natural Wonder, Karnataka Tourism, Indian Heritage, Ancient Monuments, Religious Sites, Travel Destinations, Natural Marvels, Rock Formations, Bharatamuni Idol, Bagalkot Attractions.,Cultural-Activity,Religion", "url": "https://publicnext.com/node" } ಬಾಗಲಕೋಟೆ : ಭದ್ರಗಿರಿ ಬೆಟ್ಟದ ಕಲ್ಲಿನಲ್ಲಿ ಅರಳುತ್ತಿರುವ ಭರತಮುನಿ ಮೂರ್ತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ : ಭದ್ರಗಿರಿ ಬೆಟ್ಟದ ಕಲ್ಲಿನಲ್ಲಿ ಅರಳುತ್ತಿರುವ ಭರತಮುನಿ ಮೂರ್ತಿ

ರಬಕವಿ-ಬನಹಟ್ಟಿ : ಜೈನ ಧರ್ಮದ ಶ್ರೇಷ್ಟ ಪರಂಪರೆಯಲ್ಲಿ ಆಹಾರ ತ್ಯಜಿಸಿ, ಕಠಿಣ ನಿಯಮಗಳ ಮೂಲಕ ಯಮಸಲ್ಲೇಖನ ವೃತ್ತವನ್ನು ಆಚರಿಸುವುದು ಸಂಪ್ರದಾಯವಾಗಿದೆ. ಅಂತಹ ಸಂಪ್ರದಾಯವನ್ನು ಸುಕ್ಷೇತ್ರ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಕ್ಷೇತ್ರದಲ್ಲಿ ಮೂವರು ಮಾತಾಜಿಗಳು ಯಮಸಲ್ಲೇಖನ ವೃತವನ್ನು ಸ್ವಿಕರಿಸಿ, ಆಚರಿಸುತ್ತಿದ್ದಾರೆ ಎಂದು ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರು ಮಾಧ್ಯಮದವರಿಗೆ ತಿಳಿಸಿದರು.

ಹಳಿಂಗಳಿ ಗ್ರಾಮದ ಭದ್ರಗಿರಿಯಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಅವರು ಮಾತನಾಡಿ, 772 ಜೈನಮುನಿಗಳು ಕ್ಷೇತ್ರಕ್ಕೆ ಬಂದು, ಸಲ್ಲೇಖನ ಪಡೆದುಕೊಂಡ ಪುಣ್ಯಭೂಮಿ ಭದ್ರಗಿರಿಯಾಗಿದೆ. ಅಂತಹ ಕ್ಷೇತ್ರದಲ್ಲಿ (ಪೂರ್ವಾಶ್ರಮದ ತಮದಡ್ಡಿಯ) ದರ್ಶನ ಭೂಷಣ ಮತಿ, (ಪೂರ್ವಾಶ್ರಮದ ಕೊಲ್ಲಾಪೂರ ಜಿಲ್ಲೆಯ ಅಮೃತಲಾಟದ) ಜ್ಞಾನಭೂಷಣಮತಿ, (ಶಿರದವಾಟದ) ಚಾರಿತ್ರಭೂಷಣಮತಿ ಮಾತಾಜಿಯವರು ಯಮಸಲ್ಲೇಖನ ವೃತ ಆಚರಿಸುತ್ತಿದ್ದಾರೆ.

ಅನುಕ್ರಮವಾಗಿ ಒಂದು ಧಾನ್ಯ ಅಂದರೇ ಅಕ್ಕಿ, ಬೆಳೆಯ ಆಹಾರ ಸೇವನೆ,(ಎರಡು ಆಹಾರ, ಒಂದು ಉಪವಾಸ), ಎರಡು ಧಾನ್ಯ ಆಹಾರ ಸೇವನೆ, ಮೂರು ಧಾನ್ಯ ಆಹಾರ ಸೇವನೆ ವೃತದೊಂದಿಗೆ ದೇಹದಿಂದ ಆತ್ಮ ಮುಕ್ತ ಮಾಡುವ ಯಮಸಲ್ಲೇಖನ ನಿಯಮ ಆಚರಿಸುತ್ತಿದ್ದಾರೆ ಎಂದರು.

ಮತ್ತೊಂದು ವಿಶೇಷತೆಯಾಗಿ, ಭದ್ರಗಿರಿ ಬೆಟ್ಟದಲ್ಲಿ ದೊರೆಯುವ ಬಿಳಿ ಕಲ್ಲನ್ನು ಬಳಸಿಕೊಂಡು ಚಕ್ರವರ್ತಿ ಭರತಮುನಿಯ ಹದಿಮೂರು ಪೂಟ ಎತ್ತರದ ಮೂರ್ತಿಯನ್ನು 17ಪೂಟ ಉದ್ದ, 6ಪೂ.ಅಗಲ ಮತ್ತು 5ಪೂ. ದಪ್ಪದ ಬೃಹತ್ ಕಲ್ಲಿನಲ್ಲಿ ನಿರ್ಮಿಸಲಾಗುತ್ತಿದೆ. ಗ್ರೆನೈಟ್ ಕಲ್ಲಿನ ಮಾದರಿ ಇದಾಗಿದ್ದು, ಹದಿನೈದು ದಿನಗಳಲ್ಲಿ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.

ಈ ಕುರಿತಂತೆ ಕುಲರತ್ನಭೂಷಣ ಮಹಾರಾಜರು ಮಾಹಿತಿ ನೀಡುತ್ತಾ, ಭರತಮುನಿಯು ಕೇವಲ ಜ್ಞಾನಿಯಾಗಿರುವುದರಿಂದ ಶ್ರೀವತ್ಸ, ಪಿಂಚಿ, ಕಮಂಡಲ, ಚಿನ್ಹೆಗಳನ್ನು ಬಳಸಿರುವುದಿಲ್ಲ. ಕಮಲ ಪೀಠದಮೇಲೆ ಖಡ್ಗಾಸನದಲ್ಲಿ ನಿಂತಂತಹ ಸುಂದರ ಮೂರ್ತಿ ಇದಾಗಿದೆ. ಕೇಶರಾಶಿಯು ಕೂಡ ಇರುವುದಿಲ್ಲಾ. ಓಡಿಸ್ಸಾ ಮತ್ತು ಜೈಪೂರದ ಪವನ, ಪಲ್ಲಯ್ಯ, ರುಗಾರಾಮ್, ಬಿತಿನ್, ಬಾದಲ್, ರಾಹುಲ್, ಹಿಮ್ಮತ್ ಅನೇಕ ಕಲಾವಿದರು ಕೆತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಮಾತಾಜಿಗಳು ಸೇರಿದಂತೆ ಆರಿಕಾಗಳು, ಶ್ರಾವಕ, ಶ್ರಾವಕಿಯರು ಇದ್ದರು.

Edited By : Manjunath H D
PublicNext

PublicNext

06/01/2025 05:21 pm

Cinque Terre

31.32 K

Cinque Terre

0