ಚಿತ್ರದುರ್ಗ: ಚಳ್ಳಕೆರೆಯ ಎಸ್.ಆರ್ ಡಾಬಾ ಬಳಿ ಕಾರು ಪಲ್ಟಿ ಹೊಡೆದ ಪರಿಣಾಮ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹೊರವಲಯದ ಎಸ್ ಆರ್ ಡಾಬಾ ಬಳಿ ಬೆಳಗ್ಗಿನ ಜಾವದ ವೇಳೆ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಪವನ್, ಶಿವಾನಿ ಹಾಗೂ ಕೀರ್ತನಾ ಎಂಬ ಮೂವರು ಗಾಯಗೊಂಡಿದ್ದು ಸ್ಥಳೀಯರು ಗಾಯಾಳುಗಳನ್ನ ಉಪಚರಿಸಿ ಆ್ಯಂಬುಲೆನ್ಸ್ ಮೂಲಕ ಚಳ್ಳಕೆರೆಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಇವರೆಲ್ಲರು ಹೈದರಾಬಾದ್ ನಿಂದ ಚಳ್ಳಕೆರೆ ಮಾರ್ಗವಾಗಿ ಮಂಗಳೂರಿಗೆ ಹೊರಟಿದ್ದು ಕಾರು ಚಳ್ಳಕೆರೆ ಹೊರವಲಯದಲ್ಲಿ ಕಾರಿನ ಟೈಯರ್ ಬಸ್ಟ್ ಆಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಉರುಳಿ ಬಿದ್ದು ಕಾರು ಜಖಂ ಗೊಂಡಿದ್ದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
PublicNext
17/01/2025 03:01 pm