ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ವಿದ್ಯಾರ್ಥಿ ನಾಪತ್ತೆ, ಹುಡುಕಿಕೊಡುವಂತೆ ತಂದೆ ತಾಯಿ ಅಳಲು

ವಿಜಯನಗರ: ಸಿರಗುಪ್ಪ ತಾಲೂಕಿನ ಕೆಂಚನಗುಡ್ಡದ ಮೊರಾರ್ಜಿ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತಿದ್ದ ವಿದ್ಯಾರ್ಥಿ ಎಲ್.ವಿ. ಮಣಿಕಂಠ (14) ಮನೆಯಿಂದ ಮರಳಿ ಹಾಸ್ಟೆಲ್ ಗೆ ಹೋದವನು ನಾಪತ್ತೆಯಾಗಿದ್ದಾನೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತುಂಬಿಗೆರೆದೊಡ್ಡ ತಾಂಡದ ವಿದ್ಯಾರ್ಥಿ ಮಣಿಕಂಠನನ್ನ ಹುಡುಕಿಕೊಡಿ ಅಂತ ತಂದೆ ವೆಂಕಟೇಶ ನಾಯ್ಕ ಹಾಗೂ ತಾಯಿ ಕುಸುಮ ಬಾಯಿ ಸೇರಿ ಗ್ರಾಮಸ್ಥರು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ್ರು.

ಇನ್ನೂ 22 ದಿನ ಕಳೆದರೂ ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಹೆತ್ತವರು ಮಗನ ಹುಡುಕಿ ಕೊಡಿ ಅಂತ ಅಳಲು ತೋಡಿಕೊಂಡಿದ್ದಾರೆ. 2024 ರ ಡಿಸೆಂಬರ್ 27ರಂದು ವಿಜಯನಗರದ ಬಸ್ ನಿಲ್ದಾಣದ ಮುಂಭಾಗದ ಸಾವಜಿ ಹೋಟೆಲ್ ನಲ್ಲಿ ಊಟ ಮಾಡಿ ಹೋಗುತ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Edited By : Shivu K
PublicNext

PublicNext

17/01/2025 02:50 pm

Cinque Terre

14.47 K

Cinque Terre

0

ಸಂಬಂಧಿತ ಸುದ್ದಿ