ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: "ಕೇಂದ್ರ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರ ಬಗ್ಗೆ ಓದಿಕೊಳ್ಳಲಿ" - ನಟ ಚೇತನ ಕಿಡಿ

ವಿಜಯಪುರ: ಬಾಬಾ ಸಾಹೇಬ್‌ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅವಹೇಳನಕಾರಿ ಹೇಳಿಕೆ ಆರೋಪದ ಕುರಿತು ನಟ ಚೇತನ ಪ್ರತಿಕ್ರಿಯಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರ ಮಾತುಗಳನ್ನ ಕೇಳಿದ್ದೇನೆ, ಅದೂ ನಿಜಕ್ಕೂ ಸತ್ಯ, ಅಂಬೇಡ್ಕರ್ ಅವರ ಹೆಸರು ಹೇಳೋದು ಇತ್ತಿಚ್ಚಿಗೆ ನೂರಕ್ಕೆ ನೂರರಷ್ಟು ಪ್ಯಾಶನ್ ಆಗಿ ಬಿಟ್ಟಿದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಅಂಬೇಡ್ಕರ ಅವರ ಹೆಸರು ಹೇಳುವ ಬದಲು ದೇವರ ನಾಮ ಜಪ ಮಾಡಿದರೇ ಪುಣ್ಯ ಬರುತ್ತಿತ್ತು ಎನ್ನುವದು ಅಜ್ಞಾನದ ಮಾತಾಗಿದೆ ಎಂದು ನಟ ಅಹಿಂಸಾ ಚೇತನ ಹೇಳಿದರು.

ಶಾ ಅವರು ತಿಳುವಳಿಕೆ ಕಡಿಮೆ ಇರುವ ಮಾತುಗಳನ್ನ ಆಡಿದ್ದಾರೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಉತ್ತಮವಲ್ಲದ ಸಾಕಷ್ಟು ಮಾತುಗಳನ್ನ ಆಡುತ್ತಾರೆ ಅವರ ಮೇಲೆ ಯಾರು ಅವರನ್ನ ಜೈಲಿಗೆ ಹಾಕಿ ಅಂತ ಹೇಳುವುದಿಲ್ಲ, ನಿಮಗೆ ವಾಕ್ ಸ್ವಾತಂತ್ರ್ಯ ಇದೆ, ನೀವ್ ಹೇಳಿ ಈ ವಿಷಯದಲ್ಲಿ ಅಮಿತ್ ಶಾ ಅವರು ಬಾಬಾಸಾಹೇಬರ ಬಗ್ಗೆ ಇನ್ನೂ ಓದಬೇಕು, ವೈಜ್ಞಾನಿಕವಾಗಿ ಆಲೋಚನೆ ಮಾಡಬೇಕು, ಅಷ್ಟೆ ಇದನ್ನ ಕಾಂಗ್ರೆಸ್ ತಮ್ಮ ಸ್ವಾರ್ಥಕ್ಕಾಗಿ ದುರಪಯೋಗ ಮಾಡುತ್ತಿದೆಯಲ್ಲ, ಇದು ವೈಚಾರಿಕತೆ ಅಲ್ಲಾ, ದೇಶದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಹೋರಾಟ ಮಾಡಿ ಆದರೆ ಈ ಹೋರಾಟ ಒಂದು ಪಕ್ಷಕ್ಕೆ ಸೀಮಿತ ಆಗಬಾರದು.

ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ

Edited By : Suman K
PublicNext

PublicNext

17/01/2025 02:48 pm

Cinque Terre

11.13 K

Cinque Terre

1