ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿನ ಬಿ ಗೇಟ್‌ನ ಪೂರ್ವ ದಿಕ್ಕಿನಲ್ಲಿ ಸುಮಾರು 300 ಮೀಟರ್ ದೂರದಲ್ಲಿ ಮೂರು ಶ್ರೀಗಂಧದ ಮರಗಳನ್ನು ಕಡಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪೂರ ಬಳಿ ನಡೆದಿದೆ.
ಬಳಗಿನ ಮುಂಜಾನೆ 7:45ರ ಸಮಯದಲ್ಲಿ ಕಳ್ಳರು ಶ್ರೀಗಂಧದ ಮರಗಳನ್ನ ಕಡಿಯಲು ಯತ್ನಿಸಿದ್ದಾರೆ. ಬಳಿಕ ಮರಗಳನ್ನ ಕಡಿಯುವ ಸದ್ದು ಕೇಳಿ ಸ್ಥಳೀಯರು ಹಂಪಿ ವಿಶ್ವವಿದ್ಯಾಲಯ ಸಿಬ್ಬಂದಿ ರಾಮಾಂಜನೇಯ ಅನ್ನೋರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶ್ರೀಗಂಧ ಇರೋ ಸ್ಥಳಕ್ಕೆ ವಿವಿ ಸಿಬ್ಬಂದಿ ಬರ್ತಿದ್ದಾರೆ ಅನ್ನೋ ಮಾಹಿತಿ ಗೊತ್ತಾಗ್ತಿದ್ದಂತೆ ಅರ್ಧಂಬರ್ಧ ಶ್ರೀಗಂಧದ ಮರಗಳನ್ನ ತುಂಡರಿಸಿ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಶ್ರೀಗಂಧ ಮರ ಕಡಿತ ವಿಚಾರಕ್ಕೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Kshetra Samachara
17/01/2025 02:07 pm