ಹಾನಗಲ್ಲ: ಪಟ್ಟಣದಲ್ಲಿ ಏಳು ದಿನಗಳ ಕಾಲ ನಡೆಯುವ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು. ಚಿಕ್ಕಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತೇರನ್ನು ಎಳೆದದ್ದು ಭಕ್ತರನ್ನು ಸಂತಸಗೊಳಿಸಿತು.
ಇಲ್ಲಿನ ಸಾಲಗೇರಿ ಶಿಬಾರಕಟ್ಟೆಯಿಂದ ಹೊರಟ ರಥೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಡಗರ ಸಂಭ್ರಮದ ವಿವಿಧ ವಾದ್ಯ ವೈಭವದೊಂದಿಗೆ ಜರುಗಿ ಧರ್ಮಾ ನದಿ ತೀರದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ತಲುಪಿತು.
Kshetra Samachara
15/01/2025 07:03 pm