ಹಾವೇರಿ: ಸಂಕ್ರಾಂತಿಯಂದು ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೊಂಕಣ ಗ್ರಾಮದಲ್ಲಿ ಬಳಿ ನಡೆದಿದೆ. ಹೊಂಕಣ ಗ್ರಾಮದ ಬಳಿ ಇರೋ ವರದಾ ನದಿಯಲ್ಲಿ ಈಜಲು ತೆರಳಿದ್ದಾಗ ಘಟನೆ ನಡೆದಿದೆ.
ಮೃತ ಯುವಕನನ್ನ 32 ವರ್ಷದ ರಮೇಶ ಕಡ್ಡೇರ್ ಎಂದು ಗುರುತಿಸಲಾಗಿದೆ.
ರಮೇಶ್ ಹಿರೇಕೆರೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ.
ರಮೇಶ ಸ್ನೇಹಿತರೊಂದಿಗೆ ಸಂಕ್ರಾಂತಿ ಹಬ್ಬಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆಡೂರು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನದಿ ದಂಡೆಯಲ್ಲಿರೋ ಯುವಕರನ್ನ ಊರಿಗೆ ಕಳಿಸಿದರು.
PublicNext
15/01/2025 07:39 am