ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಂದ ನಷ್ಟ

ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೆಕ್ಕೆಜೋಳದ ರಾಶಿಯ ಬಣವಿಗಳಿಗೆ ಬೆಂಕಿತಗುಲಿ 10 ಬಣವೆಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಲಕೋಟಿ ಗ್ರಾಮದಲ್ಲಿ ನಡೆದಿದೆ. 4 ಮೆಕ್ಕೆಜೋಳದ ತೆನೆಯ ರಾಶಿ, 6 ಮೇವಿನ ಬಣವೆಗಳು ಸುಟ್ಟು ಕರಕಲಾಗಿವೆ.

ಕಲಕೋಟಿ ಗ್ರಾಮದ ದ್ಯಾಮಣ್ಣ ತಳವಾರ ಮತ್ತು ಮೃತ್ಯುಂಜಯ ಹಿರೇಮಠ ಎಂಬುವರಿಗೆ ಸೇರಿದ ಮೆಕ್ಕೆಜೋಳದ ರಾಶಿಗಳು ಸುಟ್ಟು ಕರಕಲಾಗಿವೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ಮೆಕ್ಕೆಜೋಳದ ತೆನೆಯ ರಾಶಿ ಸುಟ್ಟು ಹೋಗಿದ್ದು ರೈತರಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಗೋವಿನಜೋಳದ ತೆನೆಯ ರಾಶಿಗೆ ಮತ್ತು ಮೇವಿನ ಬಣವಿಗಳಿಗೆ ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿತು. ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಬೆಂಕಿಯಿಂದ ಹಾನಿಗೊಳಗಾದ ರೈತರು ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

Edited By : Vinayak Patil
PublicNext

PublicNext

13/01/2025 10:43 am

Cinque Terre

21.72 K

Cinque Terre

0