ಹಾವೇರಿ : ದನ ಬೆದರಿಸುವ ಸ್ಪರ್ಧೆಯಲ್ಲಿ ರಾಜ್ಯ ನೆರೆ ರಾಜ್ಯದಲ್ಲಿ ಹೆಸರು ಮಾಡಿದ್ದ ಕಾಶಂಬಿಯ ಹುಲಿ ಖ್ಯಾತಿಯ ಕೊಬ್ಬರಿ ಹೋರಿ ಸಾವನ್ನಪ್ಪಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕಾಶಂಬಿ ಗ್ರಾಮದ ಹೋರಿ ಕಾಶಂಬಿ ಹುಲಿ ಎಂದೇ ಅಖಾಡದಲ್ಲಿ ಪ್ರಸಿದ್ದಿಯಾಗಿತ್ತು.
ಹಾವೇರಿ ಜಿಲ್ಲೆಗಳಲ್ಲದೇ ನೆರೆ ರಾಜ್ಯದ ಸ್ಪರ್ಧೆಯಲ್ಲಿ ಹೋರಿ ತನ್ನದೇ ಆದ ಛಾಪು ಮೂಡಿಸಿತ್ತು. ದನ ಬೆದರಿಸುವ ಸ್ಪರ್ಧೆಯಲ್ಲಿ ಕಾಶಂಬಿ ಹುಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ಹೋರಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ರಾಜ್ಯದ ವಿವಿಧಡೆಯಲ್ಲಿರುವ ಹೋರಿ ಅಭಿಮಾನಿಗಳು ಆಗಮಿಸಿ ನೆಚ್ಚಿನ ಹೋರಿಯ ದರ್ಶನ ಪಡೆದರು. ಪೂಜೆ ಸಲ್ಲಿಸಿ ಅಂತಿಮ ವಿದಾಯ ತಿಳಿಸಿದರು. ಹೋರಿ ಮಾಲೀಕ ರಮೇಶ ಮುತ್ತಳ್ಳಿ ಹೋರಿ ಅಂತ್ಯಕ್ರಿಯೆ ನಡೆಸಿದರು.
Kshetra Samachara
10/01/2025 11:19 am