", "articleSection": "Cultural Activity,Human Stories,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1736594745-V12~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಕಳೆದ ಐದು ದಿನಗ...Read more" } ", "keywords": "Haveri, Janapada Vibhava, Hukkerimath Jatra, folk festival, cultural event, Karnataka tradition, rural festival, Hukkerimath temple.,Cultural-Activity,Human-Stories,News,Public-News", "url": "https://publicnext.com/node" }
ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಕಳೆದ ಐದು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳು ನಡೆದರೆ ಕೊನೆಯ ದಿನವಾದ ಶುಕ್ರವಾರ ಶ್ರೀಗಳ ಭಾವಚಿತ್ರದ ಉತ್ಸವ ನಡೆಸಲಾಯಿತು. ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರವನ್ನು ಕಟ್ಟಿಗೆಯ ಮಂಟಪದಲ್ಲಿಟ್ಟು ತೆರೆದ ವಾಹನದಲ್ಲಿ ಉತ್ಸವ ನಡೆಸಲಾಯಿತು.
ಹುಕ್ಕೇರಿಮಠದ ಸದಾಶಿವ ಶ್ರೀಗಳು ವಿವಿಧ ಶ್ರೀಗಳು ಉತ್ಸವಕ್ಕೆ ಚಾಲನೆ ನೀಡಿದರು. ಹುಕ್ಕೇರಿಮಠದಿಂದ ಆರಂಭವಾದ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಹುಕ್ಕೇರಿಮಠದ ಶಿವಬಸವ ಶ್ರೀಗಳ 79ನೇ ಮತ್ತು ಶಿವಲಿಂಗ ಶ್ರೀಗಳ 16ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಾವಚಿತ್ರದ ಉತ್ಸವ ನಡೆಸಲಾಯಿತು. ಉತ್ಸವ ಬರುವ ಹಾದಿಯುದ್ದಕ್ಕೂ ನಿಂತ ಭಕ್ತರು ತೆಂಗಿನಕಾಯಿ, ಬಾಳೆಹಣ್ಣು ನೈವೇದ್ಯ ಹಿಡಿದರು.
ಉತ್ಸವದಲ್ಲಿ 11ಕ್ಕೂ ಅಧಿಕ ಕಲಾತಂಡಗಳು, ಸ್ತಬ್ಧಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ಪುರವಂತಿಕೆ, ನಂದಿಕೋಲು, ತಾಳಮೇಳ, ಜಾಂಜ್, ಡೊಳ್ಳುಕುಣಿತ, ಆನೆ ಸವಾರಿ, ಕರಡಿಮಜಲು, ಹುಲಿ ಕುಣಿತ, ಲಂಬಾಣಿ ನೃತ್ಯಗಳು ಗಮನ ಸೆಳೆದವು. ಉತ್ಸವ ಸಂಚರಿಸುವ ಮಾರ್ಗದ ಉದ್ದಕ್ಕೂ ಭಕ್ತರು ನೀರು ಹಾಕಿ ಶುಚಿ ಗೊಳಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಉಭಯಶ್ರೀಗಳ ಗದ್ದುಗೆ ಮಠವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
PublicNext
11/01/2025 04:55 pm