ಹಾವೇರಿ: ಬೈಕ್ ಸವಾರನ ನಿರ್ಲಕ್ಷ್ಯಕ್ಕೆ ಆತನ ಪತ್ನಿಯೇ ಬಲಿಯಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ನಲ್ಲಿ ನಡೆದಿದೆ. ಟೋಲ್ ಗೇಟ್ ಹಾಕಿದ್ದರೂ ನಿರ್ಲಕ್ಷ್ಯದಿಂದ ಬೈಕ್ ಸವಾರ ಬೈಕ್ ಚಾಲನೆ ಮಾಡಿದ್ದಾನೆ. ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಬೈಕ್ ಸವಾರ ಮಲ್ಲಿಕಾರ್ಜುನ ಪತ್ನಿ ತಲೆ ಟೋಲ್ ಗೇಟ್ ತಡೆಗಂಬಕ್ಕೆ ಬಡಿದು ಬಿದ್ದು ಸಾವನ್ನಪ್ಪಿದ್ದಾಳೆ.
ಟೋಲ್ ಗೇಟ್ ನ ತಡೆಗಂಬ ಬಡಿದು ಸಾವನ್ನಪ್ಪಿದ ಮಹಿಳೆಯನ್ನ ೪೮ ವರ್ಷದ ಗಿರಿಜಮ್ಮ ಹಾವೇರಿ ಎಂದು ಗುರುತಿಸಲಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟೋಲ್ ಗೇಟ್ ಹಾಕಿದ್ದರೂ ಸೈಡಿಗೆ ಹೋಗದೆ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿದ್ದರಿಂದ ದುರಂತ ಸಂಭವಿಸಿದೆ.
PublicNext
10/01/2025 12:47 pm