", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1736934705-WhatsApp-Image-2025-01-15-at-3.21.37-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಬೆಂಗಳೂರಿನಲ್ಲಿ ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯ ಹೆಚ್ಚಾಗಿದೆ. ತನ್ನ ಪಾಡಿಗೆ ಇದ್ದ ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ ಮುಂದು...Read more" } ", "keywords": "Bangalore News, Animal Cruelty, Voice for Animals, Karnataka Animal Welfare, Bangalore Animal Abuse, Cruelty to Animals, Animal Rights, Stop Animal Abuse.,Bangalore,Bangalore-Rural,Crime", "url": "https://publicnext.com/node" } ಬೆಂಗಳೂರು: ಮೂಕ ಪ್ರಾಣಿಯ ಮೇಲೆ ಕ್ರೌರ್ಯಕ್ಕೆ ಕೊನೆ ಇಲ್ಲವೇ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೂಕ ಪ್ರಾಣಿಯ ಮೇಲೆ ಕ್ರೌರ್ಯಕ್ಕೆ ಕೊನೆ ಇಲ್ಲವೇ?

ಬೆಂಗಳೂರು: ಬೆಂಗಳೂರಿನಲ್ಲಿ ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯ ಹೆಚ್ಚಾಗಿದೆ. ತನ್ನ ಪಾಡಿಗೆ ಇದ್ದ ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ ಮುಂದುವರಿದಿದೆ. ಜೆಪಿ ನಗರ ಬೆನ್ನಲ್ಲೇ ಈಗ ಸಹಕಾರ ನಗರದಲ್ಲೂ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಸಹಕಾರ ನಗರದಲ್ಲಿ ಬೀದಿ ನಾಯಿ ಮೇಲೆ ರೆಡ್ ಕಲರ್ ಥಾರ್ ಹರಿಸಿರುವ ಘಟನೆ ದೃಶ್ಯದಲ್ಲಿ ಸೆರೆಯಾಗಿದೆ.

ಸಹಕಾರ ನಗರದ ಎಫ್ ಬ್ಲಾಕ್‌ನ 14ನೇ ಮುಖ್ಯ ರಸ್ತೆಯ ಫೋಸ್ಟ್ ಆಫೀಸ್ ಬಳಿ ಘಟನೆ ನಡೆದಿದ್ದು, ರೆಡ್ ಕಲರ್ ಥರ್ ಚಾಲಕನ ವಿಕೃತಿ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಜನವರಿ 4ರಂದು ನಡೆದ ಘಟನೆಗೆ ಸ್ಥಳೀಯ ನಿವಾಸಿಗಳು, ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತ ಆಗಿದ್ದು ಅಕ್ಕ-ಪಕ್ಕದ ನಿವಾಸಿಗಳಿಗೆ ಬಹಳ ಹತ್ತಿರವಾಗಿದ್ದ ನಾಯಿ ಹಾಗೂ ಮರಿಗಳಂತೆ. ಏರಿಯಾದ ನಿವಾಸಿಗಳು ನಿತ್ಯ ತಾಯಿ ಹಾಗೂ ಮರಿಗಳಿಗೆ ಊಟ ನೀಡ್ತಿದ್ದರು..

ಡಿಸೆಂಬರ್ 4ರ ನಡುರಾತ್ರಿ ರಸ್ತೆಯಲ್ಲಿ ತಮ್ಮ ಪಾಡಿಗೆ ಆಟ ಆಡ್ತಿದ್ದವು..ಆಗ ವೇಗವಾಗಿ ಬಂದ ಥಾರ್ ಚಾಲಕ ಏಕಾಏಕಿ ನಾಯಿಗಳ ಮೇಲೆ ಕಾರು ಹರಿಸಿದ್ದಾನೆ.

ಒಂದು ನಾಯಿ ಮರಿ ಕಾರಿನ ಚಕ್ರಕ್ಕೆ ಸಿಕ್ಕು ಸ್ಥಳದಲ್ಲಿ ಒದ್ದಾಡಿದೆ. ನೋವು ತಾಳಲಾರದೆ ನರಳಿ-ನರಳಿ ಪ್ರಾಣ ಬಿಟ್ಟಿದೆ. ಮನುಷ್ಯತ್ವ ಮರೆತ ಕ್ರೂರಿಯ ವಿರುದ್ಧ ಆಕ್ರೋಶ ಹೆಚ್ಚಾಗಿದೆ.

Edited By : Shivu K
PublicNext

PublicNext

15/01/2025 03:22 pm

Cinque Terre

9.66 K

Cinque Terre

1