ಬೆಂಗಳೂರು: ನಗರದ ಹೊರವಲಯದಲ್ಲಿ ಅದೊಂದು ನಟೋರಿಯಸ್ ಗ್ಯಾಂಗ್ ಮತ್ತೆ ಆಕ್ಟೀವ್ ಆಗಿದೆ. ಈ ಗ್ಯಾಂಗ್ ಸಿಟಿಗೆ ಎಂಟ್ರಿ ಕೊಟ್ಟಿದೆ ಅಂದ್ರೆ ಸಾಲು ಸಾಲು ಪ್ರಕರಣಗಳು ದಾಖಲಾಗ್ತವೆ. ಅಟೆನ್ಷನ್ ಡೈವರ್ಟ್ ಮಾಡಿ ಬ್ಯಾಂಕ್ ನಲ್ಲಿ ಹಣ ಮತ್ತು ಚಿನ್ನ ಬಿಡಿಸಿಕೊಳ್ಳುವವರನ್ನೇ ಟಾರ್ಗೆಟ್ ಮಾಡಿ ರಾಬರಿ ಮಾಡ್ತಿದ್ದ ಓಜಿಕುಪ್ಪಂ ಗ್ಯಾಂಗ್ ನ ಇಬ್ಬರು ಸದಸ್ಯರು ಬೆಂಗಳೂರು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.
ಬ್ಯಾಂಕ್ ನಲ್ಲಿ ಹಣ ಮತ್ತು ಚಿನ್ನ ಬಿಡಿಸಿಕೊಳ್ಳುವವರನ್ನೇ ಟಾರ್ಗೆಟ್ ಮಾಡ್ತಿದ್ದ ಓಜಿಕುಪಂ ಗ್ಯಾಂಗ್ ನ ಇಬ್ಬರನ್ನ ಕೆ.ಆರ್. ಪುರಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬ್ಯಾಂಕ್ ಬಳಿಯೇ ಇರ್ತಿದ್ದ ಆರೋಪಿಗಳು ಬ್ಯಾಂಕ್ ನಿಂದ ಹಣ, ಚಿನ್ನಾಭರಣ ಡ್ರಾ ಮಾಡಲು ಹೋಗೋರನ್ನ ಟಾರ್ಗೆಟ್ ಮಾಡ್ತಿದ್ರು. ಮೊದಲು ಬ್ಯಾಂಕ್ ಗಳ ಮುಂದೆ ನಿಲ್ಲಿಸಿದ ಗಾಡಿ ಪಂಕ್ಚರ್ ಮಾಡ್ತಿದ್ರು. ಸ್ವಲ್ಪ ದೂರ ಹೋಗ್ತಿದ್ದಂತೆ ಪಂಕ್ಚರ್ ಆದ ಗಾಡಿಯಿಂದ ಕೆಳಗೆ ಇಳಿಯುವುದನ್ನೇ ಕಾಯ್ತಿದ್ರು. ಅಲ್ಲಿವರೆಗೂ ತಮ್ಮ ಬೈಕ್ ನಲ್ಲಿ ಫಾಲೋ ಮಾಡ್ಕೊಂಡು ಹೋಗ್ತಿದ್ರು. ಪಂಚರ್ ಆಯ್ತಾ ಅಂತ ಚೆಕ್ ಮಾಡಲು ಕೆಳಗೆ ಇಳಿದವರ, ಮುಂದೆ 500 ಹಣ ಹಾಕ್ತಿದ್ರು. ಹಣ ತೆಗೆದುಕೊಳ್ಳಲು ಹೋದಾಗ, ಬೈಕ್ ನಲ್ಲಿದ್ದ ಹಣ ಚಿನ್ನಾಭರಣ ಕದ್ದು ಎಸ್ಕೇಪ್ ಆಗ್ತಿದ್ರು.
ಇದೇ ರೀತಿ ಅಟೆನ್ಷನ್ ಡೈವರ್ಟ್ ಮಾಡಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇಟ್ಟಿದ್ದ ಹಣ ಕೂಡ ಎಗರಿಸಿದ್ದರು. ಈ ಓಜಿಕುಪಂ ಗ್ಯಾಂಗ್ ವಿರುದ್ಧ ಕೊತ್ತೂರು ಹಾಗೂ ಕೆ.ಆರ್.ಪುರಂ ಠಾಣೆಯಲ್ಲಿ ಬರೋಬ್ಬರಿ 9 ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಕೆಆರ್ ಪುರಂ ಪೊಲೀಸರು ಗೋಪಿ ಹಾಗೂ ಅಖಿಲ್ ನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 10 ಲಕ್ಷ ನಗದು, 2 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿದ್ದಾರೆ.
ನಂತರ ಈ ಇಬ್ಬರು ಆರೋಪಿಗಳನ್ನ ಬಾಡಿ ವಾರೆಂಟ್ ಮೇಲೆ ಕೊತ್ತನೂರು ಪೊಲೀಸರು ಪಡೆದು ವಿಚಾರಣೆ ನಡೆಸಿದ್ರು. ಆರೋಪಿಗಳು ದೋಚಿದ್ದ 324 ಗ್ರಾಂ ಚಿನ್ನ ಹಾಗೂ 1.1ಲಕ್ಷ ನಗದು ವಶಕ್ಕೆ ಪಡೆದುಕೊಂಡರು. ಸದ್ಯ ಓಜಿಕುಪಂ ಗ್ಯಾಂಗ್ ನ ಇಬ್ಬರು ಲಾಕ್ ಆಗಿದ್ದು ಇನ್ನೂ ಐವರು ಎಸ್ಕೇಪ್ ಆಗಿದ್ದಾರೆ. ಪರಾರಿಯಾಗಿರುವ ಐವರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಅದೇನೆ ಇರ್ಲಿ ಬ್ಯಾಂಕ್ ನಿಂದ ಹಣ ಡ್ರಾ ಮಾಡುವಾಗ ನೀವು ಸ್ವಲ್ಪ ಹುಷಾರಾಗಿರಿ
PublicNext
15/01/2025 07:15 pm