ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸುಗಳ ಕೆಚ್ಚಲು ಕೊಯ್ದಿರುವುದು ಅನಾಗರಿಕ ಕೃತ್ಯ ಮೃಘೀಯ ವರ್ತನೆಗಿಂತ ಘೋರ : ಬಿ.ದಯಾನಂದ್ ಬೇಸರ

ಬೆಂಗಳೂರು : ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಒಂದು ಅನಾಗರಿಕ ಕೃತ್ಯವಾಗಿದ್ದು, ಮೃಘೀಯ ವರ್ತನೆಗಿಂತ ಘೋರವಾಗಿದೆ ಎಂದು ಕಮಿಷನರ್ ಬಿ.ದಯಾನಂದ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪ್ರಕರಣದ ತನಿಖೆ ಮುಂದುವರೆಸಲಾಗಿದ್ದು, ಒರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ.

ಊಹಾಪೋಹಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಕೃತ್ಯವನ್ನ ಮನುಷ್ಯನೇ ಎಸಗಿರುವುದರಿಂದ ಮೃಗೀಯ ಎನ್ನಲು ಸಹ ಸಾಧ್ಯವಿಲ್ಲ, ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆಯನ್ನ ಮುಂದುವರೆಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

Edited By : Somashekar
PublicNext

PublicNext

15/01/2025 07:43 pm

Cinque Terre

13.71 K

Cinque Terre

0