ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್
ಬೆಂಗಳೂರು: ಡಿ.ಕೆ. ಸುರೇಶ್ ತಂಗಿ ಅಂತ ಹಲವರಿಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಐಶ್ವರ್ಯ ಗೌಡ ವಿರುದ್ಧ ಸಾಲು ಸಾಲು ಪ್ರಕರಣ ದಾಖಲಾಗ್ತಿದೆ. ಈ ಪ್ರಕರಣದ ತನಿಖಾಧಿಕಾರಿ ಬ್ಯಾಟರಾಯನಪುರ ಉಪವಿಭಾಗ ಎಸಿಪಿ ಭರತ್ ರೆಡ್ಡಿಯವರನ್ನ ಸ್ಥಳ ನಿಯೋಜನೆ ಮಾಡದೆ ಕಳೆದ ಶನಿವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಈ ವಿಚಾರವಾಗಿ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ವರ್ಗಾವಣೆ ರದ್ದುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.
ಭರತ್ ರೆಡ್ಡಿ ಕಳೆದ ಶುಕ್ರವಾರ ಶಾಸಕ ವಿನಯ್ ಕುಲಕರ್ಣಿ ಬಳಿಯಿದ್ದ ಐಶ್ವರ್ಯ ಗೌಡ ಪತಿ ಹೆಸರಿನಲ್ಲಿದ್ದ ಬೆಂಜ್ ಕಾರನ್ನ ಸೀಝ್ ಮಾಡಿದ್ರು. ಇದೇ ಕಾರಣಕ್ಕೆ ಎಸಿಪಿ ಭರತ್ ರಡ್ಡಿಯನ್ನು ವರ್ಗಾವಣೆ ಮಾಡಿರೋದಾಗಿ ಸಾಕಷ್ಟು ಚರ್ಚೆಯಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರ ಮಾಡ್ತಿದ್ದಂತೆಯೇ ಈ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಸಾರ್ವಜನಿಕ ವಲಯದಲ್ಲಿ ಪಬ್ಲಿಕ್ ನೆಕ್ಸ್ಟ್ ವರದಿ ವ್ಯಾಪಕ ಚರ್ಚೆಯಾದ ಬೆನ್ನಲ್ಲೇ ರಾಜ್ಯಸರ್ಕಾರ ಭರತ್ ರೆಡ್ಡಿ ವರ್ಗಾವಣೆಯನ್ನ ರದ್ದುಗೊಳಿಸಿ ಅದೇ ಸ್ಥಳದಲ್ಲೇ ಮುಂದುವರಿಯಲು ಆದೇಶ ಹೊರಡಿಸಿದೆ.
PublicNext
15/01/2025 08:06 pm