ಬೆಂಗಳೂರು: ನಗರ ಪೊಲೀಸ್ರು ಬೈಕ್ ಕಳ್ಳರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು ಒಂದು ಕೋಟಿ ಬೈಕ್ ಗಳನ್ನ ಸೀಜ್ ಮಾಡಿದ್ದಾರೆ. ಗಿರಿನಗರ, ರಾಜಗೋಪಾಲನಗರ ಸೇರಿದಂತೆ ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಹತ್ತು ಪ್ರಕರಣದಲ್ಲಿ 14 ಆರೋಪಿಗಳನ್ನ ಬಂಧಿಸಿ 89 ಬೈಕ್ ಗಳನ್ನ ಸೀಜ್ ಮಾಡಿದ್ದಾರೆ.
ಅದ್ರಲ್ಲಿ ಮುಖ್ಯವಾಗಿ ಯಾವಾಗಲೂ ಕೈ ತುಂಬಾ ಕಾಸು ಇರ್ತಿತ್ತು. ಮನೆಯಿಂದ ಡ್ಯೂಟಿಗೆ ಹೋಗುವಂತೆ ರೆಡಿಯಾಗಿ ಬರ್ತಿದ್ದವನು ಮಾಡ್ತಿದದ್ದು ಮಾತ್ರ ಬೈಕ್ ಕಳ್ಳತನ ಮಾಡ್ತಿದ್ದ ಆನಂದ್ ಎಂಬಾತನನ್ನ ಬಂಧಿಸಿದ್ದಾರೆ. ಹಾಡಹಗಲೇ ಬೈಕ್ ಕದಿಯುತ್ತಿದ್ದ ಆನಂದ ಬರ್ತ್‌ಡೇ ದಿನವೇ ರಾಜಗೋಪಾಲನಗರ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಬಂಧಿತನಿಂದ 15 ಕ್ಕೂ ಹೆಚ್ಚು ಬೈಕ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಿಷ್ಟೆ ಅಲ್ಲದೆ, ಗಿರಿನಗರ ಪೊಲೀಸ್ರು ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. 12 ಬೈಕ್ ಕದ್ದಿದ್ದ ಭರತ್, 5 ಬೈಕ್ ಕದ್ದಿದ್ದ ಅಭಿಷೇಕ್ ನನ್ನು ಜೈಲಿಗಟ್ಟಿದ್ದಾರೆ. 12 ಬೈಕ್ ಹಾಗೂ ಒಂದು ಆಟೋ ಕದ್ದಿದ್ದ ಆರೋಪಿ ಮಹಮ್ಮದ್ ನಿಸಾರ್ ನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಹೆಚ್ ಎಎಲ್ , ಬಣಸವಾಡಿ, ಬೆಳ್ಳಂದೂರು, ಜೆಪಿ ನಗರ, ಬಸವನಗುಡಿ ಪೊಲೀಸರು 6 ಪ್ರತ್ಯೇಕ ಪ್ರಕರಣದಲ್ಲಿ 9 ಆರೋಪಿಗಳನ್ನ ಬಂಧಿಸಿದ್ದಾರೆ. ಈ ಆರೋಪಿಗಳಿಂದ ಒಟ್ಟು 37 ಬೈಕ್, 4 ಆಟೋ, ಒಂದು ಕಾರು ವಶಕ್ಕೆ ಪಡೆದಿದ್ದಾರೆ.
PublicNext
15/01/2025 08:49 pm