ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆನ್ ಲೈನ್ ಜೂಜಿಗೆ ಬಿದ್ದು ಕಳ್ಳನಾದ ಬಿಸಿಎ ಪದವೀಧರ!

ಬೆಂಗಳೂರು: ಈತ ಕಳ್ಳತನ ಮಾಡಿದ್ರೆ ಮನೆ ಡೋರ್ ಡ್ಯಾಮೇಜ್ ಆಗ್ತಿರ್ಲಿಲ್ಲ. ಕಿಟಕಿ ಕಟ್ ಆಗ್ತಿರ್ಲಿಲ್ಲ. ಆದ್ರೂ ಇವನು ಮನೆಗೆ ನುಗ್ಗಿ ನಗ-ನಗದು ದೋಚಿ ಪರಾರಿಯಾಗ್ತಿದ್ದ! ಅದು ಹೇಗಪ್ಪ ಅಂದ್ರೆ ಮನೆ ಮಾಲೀಕರು ಮಾಡೋ ಸಣ್ಣ ಎಡವಟ್ಟಿನಿಂದ.

ಎಸ್, ಮನೆಯಿಂದ ಹೊರಗೆ ಹೋಗುವಾಗ ಕೀಯನ್ನ ಶೂ rack ಅಥವಾ ಪಾಟ್ ಕೆಳಗೆ ಇಟ್ಟು ಹೋಗುವ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ ಇತನ ಹೆಸ್ರು ಮೂರ್ತಿ, ಬೊಮ್ಮಸಂದ್ರ ನಿವಾಸಿ. ಬಿಸಿಎ ಓದಿ ಒಳ್ಳೆ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಆನ್ ಲೈನ್ ಜೂಜಿಗೆ ಬಿದ್ದು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಈತ ಹಣಕ್ಕಾಗಿ ಕಳ್ಳತನದ ದಾರಿ ಹಿಡಿದಿದ್ದ. ಒಬ್ಬನೇ ಕಳ್ಳತನ ಮಾಡ್ತಿದ್ದ ಈತ ಹಗಲು ಹೊತ್ತಲ್ಲೇ ಮನೆ ಕೀಯನ್ನ ಕಿಟಕಿ, ಶೂ rack ಮತ್ತು ಪಾಟ್ ಬಳಿ ಇಡ್ತಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ. ಕಳೆದ ಎರಡು ವರ್ಷಗಳಿಂದ ಕಳ್ಳತನದ ಹಾದಿ ಹಿಡಿದಿದ್ದ ಆರೋಪಿ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ಸದ್ಯ ಬೇಗೂರು ಪೊಲೀಸ್ರು ಮೂರ್ತಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 18.5 ಲಕ್ಷ ಮೌಲ್ಯದ ಸುಮಾರು 260 ಗ್ರಾಮ್ ಚಿನ್ನಾಭರಣವನ್ನ ಸೀಜ್ ಮಾಡಿದ್ದಾರೆ.

Edited By : Somashekar
PublicNext

PublicNext

15/01/2025 06:51 pm

Cinque Terre

12.2 K

Cinque Terre

0