ಬೆಂಗಳೂರು: ನಗರದಲ್ಲಿ ರಾತ್ರಿ ಇರಲಿ, ಈಗ ಹಗಲೊತ್ತಲ್ಲೂ ಓಡಾಡೋದು ಕಷ್ಟ ಆಗಿದೆ. ಜನರ ಮಧ್ಯೆ ಇದ್ರು ಸಹ ಟಾರ್ಗೆಟ್ ಮಾಡೋ ದುಷ್ಕರ್ಮಿಗಳು ರಾಬರಿ ಮಾಡಲು ಶುರು ಮಾಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಆದ್ರೆ ಸಾಕು, ಓಡಾಡೋದೆ ಕಷ್ಟ ಎನ್ನುತಿದ್ರು. ಬೆಳ್ಳಂಬೆಳಿಗ್ಗೆ 8.45ರ ಸಮಯದಲ್ಲಿ ಕೆಆರ್ ಮಾರ್ಕೆಟ್ ನಂತಹ ಜನ ನಿಬಿಡ ಸ್ಥಳದಲ್ಲೇ ನಿಂತಿದ್ದ ವ್ಯಕ್ತಿ ಬಳಿ ವ್ಯಕ್ತಿಯೋರ್ವ ಬಂದಿದ್ದ. ಹೆಲ್ಮೆಟ್ ಧರಿಸಿದ್ದ ಆತ ಸೀದಾ ತನ್ನ ಬಳಿ ಇದ್ದ ಚಾಕು ತೋರಿಸಿ ಹಣ ಕೊಡು ಅಂತ ಡಿಮ್ಯಾಂಡ್ ಮಾಡಿದ್ದ. ಆತಂಕಗೊಂಡ ಆ ವ್ಯಕ್ತಿ ಜನರ ನಡುವೆ ಸೇರಿಕೊಂಡರೂ ಬಿಡದ ದುಷ್ಕರ್ಮಿ ಚಾಕುವಿನಿಂದ ಹಲ್ಲೆ ಮಾಡೋ ರೀತಿ ಬೆದರಿಸಿ ವ್ಯಕ್ತಿಯ ಬಳಿಯಿಂದ 15 ಸಾವಿರ ರೂ. ದೋಚಿದ್ದಾನೆ.
ವೃತ್ತಿಯಲ್ಲಿ ಬಟ್ಟೆ ವ್ಯಾಪಾರಿಯಾಗಿರೋ ರೂಪ್ ಸಿಂಗ್, ಸಂಕ್ರಾತಿ ಅಂತ ಒಳ್ಳೆ ವ್ಯಾಪಾರದ ನಿರೀಕ್ಷೆಯಲ್ಲಿ ಗಲ್ಲಾಪೆಟ್ಟಿಗೆಗೆ ಅಂತ 18 ಸಾವಿರ ಹಣ ತಂದಿದ್ದ. ಆದ್ರೆ ಅಂಗಡಿ ಮುಂದೆ ಬಂದು ಶಟರ್ ಓಪನ್ ಮಾಡುವ ಮೊದಲೇ ರೋಡ್ ರಾಬರ್ ನ ಕೃತ್ಯಕ್ಕೆ ಹಣ ಕಳೆದುಕೊಂಡಿದ್ದಾನೆ.
ಅಸಲಿಗೆ ರೂಪ್ ಸಿಂಗ್ ಬಳಿ ರಾಬರಿ ಮಾಡುವ ಮೊದಲೇ ಮತ್ತೆರಡು ಕಡೆ ವಿಫಲ ಯತ್ನ ಮಾಡಿ ಆ ಬಳಿಕ ರೂಪ್ ಸಿಂಗ್ ಗೆ ಬೆದರಿಸಿ ಹಣ ಕಿತ್ತಿದ್ದಾನಂತೆ.
ಸದ್ಯ ಘಟನೆ ಸಂಬಂಧ ರೂಪ್ ಸಿಂಗ್ ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಆದ್ರೆ ಅದೇನೆ ಇದ್ರು, ನಗರದಲ್ಲಿ ಹಾಡಹಗಲೇ ಅದು ಜನರ ನಡುವೆಯೇ ಇರುವಾಗ ಈ ರೀತಿಯ ಕೃತ್ಯ ನಿಜಕ್ಕೂ ಬೆಚ್ಚಿ ಬೀಳಿಸಿದೆ.
PublicNext
14/01/2025 08:30 pm