ಬೆಂಗಳೂರು: ಆತ ಕೆಲಸಕ್ಕೆ ಸೇರಿ ಕೆಲವೇ ತಿಂಗಳಾಗಿತ್ತು. ಆದ್ರೆ ಮೊದಲಿದ್ದ ಕೆಲಸದವರಿಗಿಂತ ಆತ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಇದು ಹಳೇ ಕೆಲವರಿಗೆ ಹೊಟ್ಟೆಕಿಚ್ಚು ತರಿಸಿತ್ತು. ಇದೇ ಹೊಟ್ಟೆಕಿಚ್ಚಿಗೆ ಸಹೋದ್ಯೋಗಿಗೆ ಬಿಯರ್ ಬಾಟಲಿಯಿಂದ ಚುಚ್ಚಿರೋ ಘಟನೆ ಆರ್ ಆರ್ ನಗರದಲ್ಲಿ ನಡೆದಿದೆ.
ಆರ್.ಆರ್ ನಗರದ ಗ್ರೀನ್ ಟ್ರೆಂಡ್ಸ್ ಸೆಲ್ಯೂನ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ 10 ದಿನದ ಹಿಂದೆ ಹೊಸದಾಗಿ ಸೆಲ್ಯೂನ್‌ಗೆ ಕೆಲಸಕ್ಕೆ ಸೇರಿದ ದರ್ಶನ್ ಹೊಟ್ಟೆಗೆ ಬಿಯರ್ ಬಾಟಲ್‌ನಿಂದ ಹೊಡೆದು ಇರಿದಿದ್ದಾನೆ. ಕೆಲಸ ಚೆನ್ನಾಗಿ ನಡೆಯುತ್ತಿದೆ ಅಂತ ಮ್ಯಾನೇಜರ್ ಕಳೆದ 11ನೇ ತಾರೀಖು ಪಾರ್ಟಿ ಅರೆಂಜ್ ಮಾಡಿದ್ರು. ಈ ಪಾರ್ಟಿಗೆ ರಾಹುಲ್, ದರ್ಶನ್, ಮ್ಯಾನೇಜರ್ ವಿನಯ್ ಸೇರಿ ಕೆಲ ಸಹೋದ್ಯೋಗಿಗಳು ಬಂದಿದ್ರು. ಈ ವೇಳೆ ಕುಡಿದ ನಶೆಯಲ್ಲಿ ರಾಹಲ್ ಏಕಾಏಕಿ ದರ್ಶನ್ ಜೊತೆಗೆ ಕಿರಿಕ್ ತೆಗೆದಿದ್ದಾನೆ. ಏನೋ ಜಾಸ್ತಿ ಮೆರಿತಿದ್ಯಾ ಅಂತ ಗಲಾಟೆ ತೆಗೆದು ಬಿಯರ್ ಬಾಟೆಲ್‌ನಿಂದ ಹೊಡೆದು ದರ್ಶನ್ ಹೊಟ್ಟೆ ಹಾಗೂ ಭುಜಕ್ಕೆ ಬಿಯರ್ ಚಾಟಲಿನಿಂದ ಚುಚ್ಚಿದ್ದಾನೆ. ಈ ಬಗ್ಗೆ ದರ್ಶನ್ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಆರ್ ಆರ್ ನಗರ ಪೊಲೀಸರು ಆರೋಪಿ ರಾಹುಲ್‌ನನ್ನು ಬಂಧಿಸಿದ್ದಾರೆ. ಆರೋಪಿ ರಾಹುಲ್ ಕಳೆದ ಒಂದು ತಿಂಗಳಿನಿಂದ ಸೆಲ್ಯೂನ್ ನಲ್ಲಿ ಕೆಲಸ ಮಾಡ್ತಿದ್ದ. ಆದರೆ ಹೊಸದಾಗಿ ಕೆಲಸಕ್ಕೆ ಸೇರಿದ ದರ್ಶನ್ ಮ್ಯಾನೇಜರ್‌ಗೆ ಹತ್ತಿರವಾಗಿದ್ನಂತೆ. ಕಂಪನಿ ಮಾಡಿದ್ದ ರೂಮ್‌ನಲ್ಲೆ ಆರೋಪಿ ರಾಹುಲ್ ಹಾಗೂ ದರ್ಶನ್ ಒಟ್ಟಿಗೆ ಇದ್ರಂತೆ. ಇನ್ನು ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆದು ಸದ್ಯ ಗಾಯಾಳು ದರ್ಶನ್ ಚೇತರಿಸಕೊಂಡಿದ್ದಾನೆ.
PublicNext
14/01/2025 02:29 pm