", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1736836428-sankasta.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕೋಟಿ ಕೋಟಿ ವಂಚನೆ ಆರೋಪ ಹೊತ್ತಿರುವ ಐಶ್ವರ್ಯಗೌಡಗೆ ಸ್ವಂತ ಮನೆ ಇಲ್ಲದೆ ಇರುವುದು ತನಿಖೆಯಿಂದ ಬಯಲಾಗಿದೆ. ಹೀಗಿದ್ದರೂ ಎಂಎಲ್‌ಎ ಆಗಬ...Read more" } ", "keywords": "Bangalore, DK Suresh, Tanvi Aishwarya Gowda, Multi-Crore Scam, MLA, Karnataka Politics, Congress Leader, Indian Politics, Scam Accused, MLA Aspirant.,Bangalore-Rural,Politics,Crime,Law-and-Order", "url": "https://publicnext.com/node" } ಬೆಂಗಳೂರು: ಡಿಕೆ ಸುರೇಶ್ ತಂಗಿ ಎಂದು ಕೋಟಿ ಕೋಟಿ ವಂಚಿಸಿದ್ದ ಐಶ್ವರ್ಯ ಗೌಡಾಗೆ ಎಂಎಲ್‌ಎ ಆಗೋ ಕನಸಿತ್ತಂತೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಿಕೆ ಸುರೇಶ್ ತಂಗಿ ಎಂದು ಕೋಟಿ ಕೋಟಿ ವಂಚಿಸಿದ್ದ ಐಶ್ವರ್ಯ ಗೌಡಾಗೆ ಎಂಎಲ್‌ಎ ಆಗೋ ಕನಸಿತ್ತಂತೆ

ಬೆಂಗಳೂರು: ಕೋಟಿ ಕೋಟಿ ವಂಚನೆ ಆರೋಪ ಹೊತ್ತಿರುವ ಐಶ್ವರ್ಯಗೌಡಗೆ ಸ್ವಂತ ಮನೆ ಇಲ್ಲದೆ ಇರುವುದು ತನಿಖೆಯಿಂದ ಬಯಲಾಗಿದೆ. ಹೀಗಿದ್ದರೂ ಎಂಎಲ್‌ಎ ಆಗಬೇಕೆಂದು ಕನಸು ಕಂಡಿದ್ದರು. ಇದೇ ಕಾರಣಕ್ಕೆ ಕೋಟಿ ಕೋಟಿ ಹಣವನ್ನು ರಾಜಕಾರಣಿಗಳಿಗೆ ಸುರಿದಿದ್ದಾಳಂತೆ.

ಐಶ್ವರ್ಯಗೌಡ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳತ್ತಲೇ ಇದೆ. ಇದೀಗ ಕೋಟ್ಯಾಂತರ ವಂಚನೆ ಮಾಡಿದ್ದ ಐಶ್ವರ್ಯಗೌಡಗೆ ಸ್ವಂತ ಮನೆ ಇರಲಿಲ್ಲವಂತೆ. ಹೌದು. ಹಲವು ಮಂದಿಗೆ ಕೋಟ್ಯಾಂತರ ವಂಚನೆ ಮಾಡಿದ ಆರೋಪ ಇದ್ದರೂ ಕೂಡ ಐಶ್ವರ್ಯಗೌಡಗೆ ಸ್ವಂತ ಮನೆ ಇರಲಿಲ್ಲ. ಬಾಡಿಗೆ ಮನೆಯಲ್ಲಿ ಐಶ್ವರ್ಯಗೌಡ ವಾಸವಾಗಿದ್ಳಂತೆ. ಅಲ್ಲದೆ ಶೋಕಿಗೆ ಬಳಸುತ್ತಿದ್ದ ಹಲವು ಕಾರುಗಳು ಕೂಡ ಬಾಡಿಗೆಗೆ ಪಡೆದಿದ್ದಳಂತೆ. ವಿಲಾಸಿ ಜೀವನನ್ನು ಮಾಡುತ್ತಿದ್ದ ಐಶ್ವರ್ಯಗೌಡ ಬಾಡಿಗೆ ಮನೆ, ಬಾಡಿಗೆ ಕಾರು ವಿಚಾರ ಗೊತ್ತಾಗಿ ಪೊಲೀಸರೇ ಶಾಕ್ ಆಗಿದ್ದಾರೆ. ಇನ್ನು ಈಕೆ ಬೇರೆಯವರ ಹೆಸರಿನಲ್ಲಿ ಏನಾದ್ರೂ ಆಸ್ತಿ ಮಾಡಿದ್ದಾಳಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ಇನ್ನು ಈ ಐಶ್ವರ್ಯಗೌಡ ಎಂಎಲ್‌ಎ ಆಗೋ ಕನಸನ್ನು ಕಂಡಿದ್ದಳಂತೆ. ಟಿಕೆಟ್‌ಗಾಗಿ ರಾಜಕಾರಣಿಗಳಿಗೆ ಕೋಟಿ ಕೋಟಿ ಹಣದ ಹೊಳೆಯನ್ನೆ ಹರಿಸಿದ್ದಳಂತೆ. ಯಾವ ಪಕ್ಷ ಅಂತಾನೂ ನೋಡದೆ ಕೋಟಿ ಕೋಟಿ ಖರ್ಚು ಮಾಡಿದ್ದಾಳೆ ಎಂದು ಹೇಳಲಾಗ್ತಿದೆ. 2023ರ ಚುನಾವಣೆಯಲ್ಲೂ ಸಹ ಕೋಟಿ ಕೋಟಿ ಹಣವನ್ನು ಐಶ್ವರ್ಯಗೌಡ ಖರ್ಚು ಮಾಡಿರೋದು ತನಿಖೆಯಲ್ಲಿ ಬಯಲಾಗಿದೆ.

ಇನ್ನು ಐಶ್ವರ್ಯಗೌಡ ಖರ್ಚು ವೆಚ್ಚದ ಸಂಪೂರ್ಣ ವಿವರವನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಎಲ್ಲಿ ಎಷ್ಟು ಖರ್ಚು ಮಾಡಿದ್ದಾಳೆ. ಎಷ್ಟು ಸಾಲ ಮಾಡಿದ್ದಾಳೆಂಬ ಪೂರ್ಣ ವಿವರವನ್ನು ಕಲೆಕ್ಟ್ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಐಶ್ವರ್ಯಗೌಡ ಖರ್ಚು ವೆಚ್ಚದ ಬ್ಯಾಲೆನ್ಸ್ ಶೀಟ್ ರೆಡಿ ಮಾಡಿ ಟ್ಯಾಲಿ ಮಾಡಲಿದ್ದಾರೆ. ಒಂದು ವೇಳೆ ಟ್ಯಾಲಿ ಆದರೆ ರಾಜಕಾರಣಿಗಳಿಗೂ ಈ ಪ್ರಕರಣದ ಉರುಳು ಬೀಳಲಿದೆ. ಇನ್ನೂ ತನಿಖೆ ವೇಳೆ ಮತ್ತೊಂದು ಇಂಟ್ರರೆಸ್ಟಿಂಗ್ ವಿಚಾರ ಬಯಲಾಗಿದೆ. ಬರೇ ಸಾಲದಲ್ಲೇ ಮುಳುಗಿದ್ದ ಐಶ್ವರ್ಯಗೌಡ ಬಣ್ಣ ಬಣ್ಣದ ಮಾತು ಕಟ್ಟಿ ಕೋಟಿ ಕೋಟಿ ಸಾಲ ಮಾಡಿದ್ದಾಳೆ. ಸಾಲ‌ಕೊಟ್ಟವರು ಕೇಳಿದಾಗ ಮತ್ತೊಬ್ಬರ ಬಳಿ ಸಾಲ ಮಾಡ್ತಿದ್ಳು ಅನ್ನೋದು ಗೊತ್ತಾಗಿದೆ. ಅಲ್ಲದೆ ಸಾಲ ಮಾಡಿ ಹಣವನ್ನು ಬಡ್ಡಿಗೆ ನೀಡ್ತಿದ್ಳಂತೆ ಐಶ್ವರ್ಯ ಗೌಡ. ಇನ್ನೂ ಬೇಲ್ ಮೇಲೆ ಐಶ್ವರ್ಯಗೌಡ ಆಚೆ ಇದ್ದರೂ ಸಹ ತನಿಖೆಯ ಬಿಸಿ ತಟ್ಟಿದ್ದು, ನಿನ್ನೆ ಸಹ ಬ್ಯಾಟರಯನಪುರ ಎಸಿಪಿ ಭರತ್ ರೆಡ್ಡಿ ಎದುರು ವಿಚಾರಣೆಗೆ ಹಾಜರಾಗಿದ್ಳು.

Edited By : Ashok M
PublicNext

PublicNext

14/01/2025 12:03 pm

Cinque Terre

22.11 K

Cinque Terre

0