ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಅಕ್ರಮ ಮರಳು ಸಾಗಾಟ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿ ಬಂಧನ

ಕಾರ್ಕಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ತಪ್ಪಿಸಿಕೊಳ್ಳಲು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿ ಕಾರು ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌.

ಕುಕ್ಕುಂದೂರು ನಿವಾಸಿ ಸೈಯದ್ ಸೈಫ್ (22) ಬಂಧಿತ ಆರೋಪಿ. ಕಾರ್ಕಳ ನಗರ ಠಾಣೆ ಪೊಲೀಸ್ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು, ಕಳವು ಮಾಡಿದ ಮರಳನ್ನು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧ ಉಂಟು ಮಾಡಿದ್ದ.ಕಾರಿನಲ್ಲಿ‌ ಮರಳು‌ ಸಾಗಾಟದ ಲಾರಿಗೆ ಬೆಂಗಾವಲಿನಂತೆ ಚಲಾಯಿಸಿದ್ದು, ಟಿಪ್ಪರ್ ನ್ನು ಪೊಲೀಸರು ಬೆನ್ನಟ್ಟುವಾಗ ಒಮ್ಮೆಲೇ ಇಲಾಖಾ ವಾಹನ ಮುಂದೆ ಚಲಾಯಿಸಿಕೊಂಡು ಹೋಗಿ ಇಲಾಖಾ ವಾಹನ ಮುಂದೆ ಹೋಗದಂತೆ ತಡೆಯುಂಟು ಮಾಡಿದ್ದ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

15/01/2025 09:47 am

Cinque Terre

720

Cinque Terre

0