ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಟ್ಯಾಂಕರ್‌ಗಳಿಂದ ಡೀಸೆಲ್ ಕಳವು - ನಾಲ್ವರು ಖದೀಮರು ಅರೆಸ್ಟ್

ಮಂಗಳೂರು: ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ನಾಲ್ವರು ಖದೀಮರನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕುಳಾಯಿಗುಡ್ಡೆ ನಿವಾಸಿ ಸಂತೋಷ್(42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್(36), ಬೆಳ್ತಂಗಡಿ ನಿವಾಸಿ ನಾರಾಯಣ್(23), ಉಡುಪಿಯ ಹೆಜಮಾಡಿ ನಿವಾಸಿ ರವಿ ಜನಾರ್ದನ ಪುತ್ರನ್ (59) ಬಂಧಿತ ಖದೀಮರು.

ಮಂಗಳೂರಿನ ಹೊರವಲಯದ ಬಾಳ ಗ್ರಾಮದ ಬಳಿ ಇರುವ ಟ್ಯಾಂಕರ್‌ಯಾರ್ಡ್‌ನಲ್ಲಿ‌ ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಈ ಗ್ಯಾಂಗ್ ಡೀಸೆಲ್ ಕಳವು ಮಾಡುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಡೀಸೆಲ್‌ ಕಳವುಗೈದು ದಾಸ್ತಾನು ಇರಿಸಿದ್ದ ಶೆಡ್ಡ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ದಾಸ್ತಾನು ಇರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

14/01/2025 01:44 pm

Cinque Terre

9.65 K

Cinque Terre

1