ಸುರತ್ಕಲ್: ಬಾಳ ಟ್ಯಾಂಕರ್ ಯಾರ್ಡ್ ಬಳಿ ಕಾರ್ಯಾಚರಿಸುತ್ತಿದ್ದ ಡೀಸೆಲ್ ಅಕ್ರಮ ಸಂಗ್ರಹದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಕುಳಾಯಿಗುಡ್ಡೆ ನಿವಾಸಿ ಸಂತೋಷ್ (42), ಕಾಟಿಪಳ್ಳ 3ನೇ ಬ್ಲಾಕ್ ನ ಐರನ್ ರಿತೇಶ್ ಮಿನೇಜ್ (36), ಬೆಳ್ತಂಗಡಿ ಪನಿಕ್ಕಲ್ ಹೌಸ್ ನಿವಾಸಿ ನಾರಾಯಣ (23), ಹೆಜಮಾಡಿ ನಿವಾಸಿ ರವಿ ಜನಾರ್ದನ್ ಪುತ್ರನ್ (59) ಎಂಬವರನ್ನು ಬಂಧಿಸಿದ್ದಾರೆ.
ಈ ಬಗ್ಗೆ 1.5 ಲಕ್ಷ ರೂ. ಮೌಲ್ಯದ 1672 ಲೀಟರ್ ಡೀಸೆಲ್, 20,000 ರೂ. ಮೌಲ್ಯದ 20 ಲೀಟರ್ ಪೆಟ್ರೊಲ್ ಹಾಗೂ ಆರೋಪಿಗಳು ಬಳಸಿದ್ದ ಒಟ್ಟು ನಾಲ್ಕು ಮೊಬೈಲ್, ಖಾಲಿ ಡ್ರಮ್, ಪ್ಲಾಸ್ಟಿಕ್ ಕ್ಯಾನ್, ಪ್ಲಾಸ್ಟಿಕ್ ಪೈಪ್ ಇತ್ಯಾದಿ ವಶಪಡಿ ಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 1.77 ಲಕ್ಷ ರೂ. ಗಳೆಂದು ಅಂದಾಜಿಸ ಲಾಗಿದೆ. ಟ್ಯಾಂಕರ್ ಚಾಲಕರ ಜತೆ ಶಾಮೀಲಾಗಿ ಮಾಲೀಕರಿಗೆ ತಿಳಿಯ ದಂತೆ ಕಳವು ನಡೆಸಿರಬೇಕು ಎಂದು ಶಂಕಿಸ ಲಾಗಿದ್ದು ಯಾವುದೇ ಪರವಾನಗಿ ಇಲ್ಲದೆ ಶೆಡ್ ಒಂದರಲ್ಲಿ ಸಂಗ್ರಹಿಸಿಡ ಲಾಗಿದ್ದು 5 ರೂ. ಕಡಿಮೆ ಬೆಲೆಗೆ ಮಾರುತ್ತಿದ್ದೇವೆ ಎಂದು ಆರೋಪಿಗಳು ಒಪ್ಪಿದ್ದಾರೆ.
ಪೊಲೀಸರು ಈ ಬಗ್ಗೆ ದಾಳಿ ಜ. 13ರಂದು ಸಂಜೆ 3.45 ಸುಮಾರಿಗೆ ನಡೆಸಿದ್ದು ದಾಳಿ ಸಂದರ್ಭ ಒಂದು ಟ್ಯಾಂಕರ್ ಅಡಿಯಲ್ಲಿ ಡೀಸೆಲ್ ಕಳವು ಕೃತ್ಯ ನಿರತರಾಗಿದ್ದು ಪರಾರಿಯಾಗಿದ್ದ ಅವರನ್ನು ಬಳಿಕ ಸೆರೆ ಹಿಡಿಯಲಾಗಿತ್ತು. ಪಣಂಬೂರು ಎಸಿಪಿ ಶ್ರೀಕಾಂತ್ ದಾಳಿ ನೇತೃತ್ವ ವಹಿಸಿದ್ದು ಸುರತ್ಕಲ್ ಠಾಣೆಯಲ್ಲಿ ಪಿಎಸ್ ಐ ಜನಾರ್ದನ ನ್ಯಾಕ್ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಆರೋಪಿಗಳನ್ನು ಮಂಗಳವಾರ ನ್ಯಾಯಾಧೀಶರ ಸಮ್ಮುಖ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿ ಸಲಾಗಿದೆ.
Kshetra Samachara
15/01/2025 07:16 am