ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿವಿಲ್ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರಾ ಪೊಲೀಸರು !

ಹುಬ್ಬಳ್ಳಿ : ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಕೇಶ್ವಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಿವಾಲ್ವರ್ ಬಳಸಿ ಹೆದರಿಸಿದ್ದಾರೆ ಎಂದು ಗೋಪನಕೊಪ್ಪ ನಿವಾಸಿ ಶ್ರೀಧರ ಅಲಿಯಾಸ್ ಚಿದು ನರಗುಂದ ಎಂಬುವವರು ಕೇಶವಾಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದರು .

ಸಮೀರ ಮೈನುದ್ದೀನ್ ಸೇರಿದಂತೆ ಆರು ಜನರ ಮೇಲೆ ದೂರು ದಾಖಲಾಗಿತ್ತು. ಇದೆ ಪ್ರಕರಣಕ್ಕೆ ಸಮೀರ ಸೇರಿದಂತೆ ಎಲ್ಲಾ ಆರೋಪಿಗಳು ಜಾಮೀನು ಪಡೆದಿದ್ದಾರೆ. ಇನ್ನೂ ಉಳಿದ ಆರೋಪಿಗಳು ಸೇರೆ ಸಿಕ್ಕಿಲ್ಲ‌. ಈ ಪ್ರಕರಣ ದಾಖಲು ಆಗಿನಿಂದಲೂ ಏನೋ ಗೋಲ್ ಮಾಲ್ ಇದೆ ಎಂಬ ಸಂಶಯ ಎಡೆಮಾಡಿಕೊಟ್ಟಿದ್ದು.

ದೂರುದಾರ ಚಿದು ನರಗುಂದ ಜಮೀನು ನೀಡುವ ವಿಚಾರವಾಗಿ ಹಣಕಾಸಿನ ವ್ಯವಹಾರವನ್ನು ಸುಂದರ್ ಪೌಲ್ ಜೊತೆ ಮಾಡಿದ್ದ,ಇದಕ್ಕೆ ಜಂಟಿಯಾಗಿ ಕೊಠಾರಿ ಸಹೋದರರು ಹಾಗೂ ಸಮೀರ ಹಣ ಹೂಡಿಕೆ ಮಾಡಿದ್ದರು. ಇದೀಗ ಅದೇ ಜಮೀನಿಗೆ ಚಿನ್ನದ ಬೆಲೆ ಬಂದಿದ್ದು ಹೇಗಾದರೂ ಮಾಡಿ ಜಮೀನನ್ನು ಮತ್ತೆ ಪಡೆಯಬೇಕು ಎನ್ನುವ ಉದ್ದೇಶಕ್ಕಾಗಿ ಈ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದೆ.

ಪೌಲ್ ಕುಟುಂಬಸ್ಥರನ್ನು, ಕೊಠಾರಿ ಸಹೋದರರು ಹಾಗೂ ಸಮೀರ ನನ್ನು ಬೆದರಿಸುವ ತಂತ್ರವಾಗಿ ಉದ್ದೇಶಪೂರ್ವಕವಾಗಿ ಸಿವಿಲ್ ವ್ಯಾಜ್ಯವನ್ನು ದೂರುದಾರ ಆಗಿರುವ ಚಿದು ಅವರಿಗೆ ಸಹಕಾರ ಮಾಡುವ ಸಲುವಾಗಿ ಪೊಲೀಸರೇ ವಿಶೇಷ ಕಾಳಜಿ ವಹಿಸಿ ಈ ದೂರು ದಾಖಲಿಸಿದ್ದರು ಎಂದು ಹುಬ್ಬಳ್ಳಿಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುಸು ಗುಸು ಕೇಳಿ ಬರುತ್ತಿದೆ.

ಅವಳಿನಗರದ ಪೊಲೀಸರು ಇತ್ತೀಚಿಗೆ ಹಲವು ಸಿವಿಲ್ ಪ್ರಕರಣಗಳಲ್ಲಿ ಮೂಗು ತೋರಿಸುತ್ತಿದ್ದು ಉದ್ಯಮಿಗಳಲ್ಲಿ ಭಯದ ವಾತಾವರಣ ಕೂಡ ಸೃಷ್ಟಿಮಾಡಿದೆ. ಇನ್ನು ಜಾಮೀನು ನೀಡಿರುವ ನ್ಯಾಯಾಧೀಶರು ಇಂತಹ ಸಿವಿಲ್ ಪ್ರಕರಣಗಳಲ್ಲಿ ಪೊಲೀಸರ ನಡೆ ಬಗ್ಗೆ ಕೂಡ ಉಲ್ಲೇಖ ಮಾಡಿದ್ದು ಗಮನಿಸಬಹುದಾಗಿದೆ.

Edited By : Nagaraj Tulugeri
Kshetra Samachara

Kshetra Samachara

14/01/2025 10:49 pm

Cinque Terre

65.37 K

Cinque Terre

32

ಸಂಬಂಧಿತ ಸುದ್ದಿ