ವಿಜಯಪುರ: ತಾಯಿ ಮಕ್ಕಳು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಈಗ ಬೇರೆ ತಿರುವು ಪಡೆದುಕೊಂಡಿದೆ.
ಹೌದು. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಕಾಲುವೆಯಲ್ಲಿ ತಾಯಿ ತನ್ನ ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯಗೆ ಯತ್ನಾಸಿದ್ದಾಳೆ ಎನ್ನಲಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಭಾರಿ ಟ್ವಿಸ್ಟ್ ಸಿಕ್ಕಂತಾಗಿದೆ. ತಾಯಿ ಭಾಗ್ಯ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಸಂಬಂಧಿಕರ ಮುಂದೆ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟದ್ದಾಳೆ.
ಪತಿ ಲಿಂಗರಾಜ ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ವಿಷ ತಂದು ಇಟ್ಟಿದ್ದ. ಒಂದೊಂದು ಬೂಚು ವಿಷ ಮಕ್ಕಳಿಗೆ ಕುಡಸಿದ್ದ. ಮನೆಯಲ್ಲಿ ಸಂಪೂರ್ಣ ವಿಷ ತಗೆದುಕೊಂಡ್ರೆ ಎಲ್ಲರಿಗೂ ಗೊತ್ತಾಗತ್ತದೆ ಅಂತ ಹೊರಗಡೆ ಕಾಲುವೆ ಹತ್ತಿರ ಕರೆದುಕೊಂಡು ಬಂದಿದ್ದ. ಮೊದಲು ಎರಡು ಮಕ್ಕಳನ್ನು ಕೆನಾಲ್‌ನಲ್ಲಿ ಎಸೆದ. ನಂತರ ನನ್ನನ್ನು ಕೆನಾಲ್‌ಗೆ ದೂಡಿದ. ನನ್ನ ಗಂಡನ್ನು ತುಂಬಾ ನಂಬಿದ್ದೆ. ದೇವರಕ್ಕಿಂತಲೂ ಹೆಚ್ಚು ನಂಬಿದ್ದೆ. ಆದ್ರೆ ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಪತಿ ಲಿಂಗಾರಾಜನ ಬಣ್ಣ ಬಯಲು ಮಾಡಿದ್ದಾಳೆ.
ಸದ್ಯ ಆತ್ಮಹತ್ಯೆ ಪ್ರಕರಣ ಬೇರೆ ತಿರುವು ಪಡೆದುಕೊಂಡಿದ್ದು, ಯಾವ ಹಂತ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೆಕಿದೆ.
PublicNext
14/01/2025 04:58 pm