ಬೆಂಗಳೂರು: ಇಂದು ವಿಶೇಷವಾಗಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ನಡೆಯುತ್ತಿದ್ದು, ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಗಂಗಧಾರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಮಾಡಲಿದ್ದು, ಸಂಜೆ 5:14 ನಿಮಿಷದಿಂದ 5:17 ನಿಮಿಷದವರೆಗೆ ಸೂರ್ಯರಶ್ಮಿ ಸ್ಪರ್ಶ ಇರಲಿದೆ. ಸೂರ್ಯ ರಶ್ಮಿ ಸ್ಪರ್ಶದ ನಂತರ ದೇವರಿಗೆ ಕ್ಷೀರಾಭಿಷೇಕ ನಡೆಯಲಿದ್ದು, ಸೂರ್ಯ ರಶ್ಮಿ ಸ್ಪರ್ಶದ ಸಂದರ್ಭ ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ.
PublicNext
14/01/2025 01:35 pm