ಬೆಂಗಳೂರು:ಇಂದು ಹಿಂದೂ ಧರ್ಮದ ಪವಿತ್ರ ದಿನ ವೈಕುಂಠ ಏಕಾದಶಿ. ಹೀಗಾಗಿ ಬೆಂಗಳೂರಿನ ಎಲ್ಲಾ ತಿರುಮಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗ್ತಿದೆ.ನಿನ್ನೆಯಿಂದಲೇ ದೇವಾಲಯಗಳಲ್ಲಿ ಶುದ್ಧೀ ಕಾರ್ಯವನ್ನ ದೇವಾಲಯ ಸಿಬ್ಬಂದಿ ಮಾಡಿದ್ದಾರೆ.
ಇನ್ನೂ ಇಂದು ಬೆಳಗ್ಗೆ ಆರು ಗಂಟೆಯಿಂದಲೇ ದೇವಾಲಯಗಳತ್ತ ಭಕ್ತರು ಆಗಮಿಸುತ್ತಿದ್ದಾರೆ.ವಿಶೇಷವಾಗಿ ಮಹಾವಿಷ್ಣು ದೇವಾಲಯಗಳತ್ತ ಕಿಕ್ಕಿರಿದು ಭಕ್ತರು ಬರುತ್ತಿದ್ದಾರೆ. ಶ್ರೀಹರಿ ನಾರಾಯಣ ವೈಕುಂಠ ದ್ವಾರವನ್ನು ತೆರೆದು ತನ್ನ ದರ್ಶನವನ್ನು ನೀಡುವ ದಿನವೇ ಈ ವೈಕುಂಠ ಏಕಾದಶಿ.ಈ ದಿನ ಹಿಂದೂ ಧರ್ಮೀಯರಿಗೆ ಅತ್ಯಂತ ವಿಶೇಷವಾದ ದಿನ.ಇಡೀ ದಿನ ಉಪವಾಸ ವೃತ ಆಚರಿಸಿ ಮಹಾವಿಷ್ಣು ಕೃಪೆಗೆ ಭಕ್ತರು ಪಾತ್ರರಾಗಲಿದ್ದಾರೆ.ಹೀಗಾಗಿ ನಗರದ ದೇವಾಲಯಗಳು ಭಕ್ತರಿಂದ ತುಂಬಿದೆ.
PublicNext
10/01/2025 01:18 pm