ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಬಳ್ಳಾಪುರ ನಗರಸಭೆ ಕಛೇರಿಯಲ್ಲಿ ಸಂಕ್ರಾಂತಿ ಸಂಭ್ರಮ

ದೊಡ್ಡಬಳ್ಳಾಪುರ: ಕೂಡು ಕುಟುಂಬದ ಸಂಭ್ರಮ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಮನೆ ಮಾಡಿತು. ಸಾಂಪ್ರದಾಯಿಕ ಧಿರಿಸು ತೊಟ್ಟ ನಗರಸಭಾ ಸದಸ್ಯರು ರಾಜಕೀಯ ಮರೆತು, ವಾದ ವಿವಾದಗಳನ್ನ ಪಕ್ಕಕ್ಕೆ ಸರಿಸಿ, ನಾವೆಲ್ಲ ನಗರಸಭೆ ಕುಟುಂಬದವರೆಂದು ಸಂಭ್ರಮಿಸಿದರು.

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಂದು ದಿನ ಮುನ್ನವೇ ಸಂಕ್ರಾಂತಿ ಸಂಭ್ರಮ, ಪುರುಷ ಸದಸ್ಯರು ಪಂಚೆ ಶಲ್ಯ ಧರಿಸಿ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಆಗಮಿಸಿದಾರೆ, ಮಹಿಳಾ ಸದಸ್ಯರು ಕೈಯಲ್ಲಿ ಎಳ್ಳು-ಬೆಲ್ಲ, ಪೊಂಗಲ್ ಹಿಡಿದು ಬಂದರು, ಚಿತ್ತಾವಿಟ್ಟ ರಂಗೋಲಿಯ ಮೇಲೆ ಕಡಲೆಕಾಯಿ, ಅವರೆಕಾಯಿ, ಗೆಣಸಿಟ್ಟು ಪೂಜೆ ಮಾಡಿದರು, ಗೋ ಪೂಜೆಯ ಮೂಲಕ ಸಂಕ್ರಾಂತಿ ಹಬ್ಬವನ್ನ ಸಂಭ್ರಮಿಸಿದರು, ಪರಸ್ಪರ ಎಳ್ಳು-ಬೆಲ್ಲ ಹಂಚುವ ಮೂಲಕ ದೊಡ್ಡಬಳ್ಳಾಪುರ ಜನತೆಗೆ ಸಂಕ್ರಾಂತಿ ಶುಭಾಶಯಗಳನ್ನ ಹೇಳಿದರು

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆನಂದ್, ಇದೇ ಮೊದಲ ಬಾರಿಗೆ ನಗರಸಭೆಯಲ್ಲಿ ಸಂಕ್ರಾಂತಿಯನ್ನ ಆಚರಿಸಲಾಗುತ್ತಿದೆ, ಪೌರಕಾರ್ಮಿಕರು, ಸಿಬ್ಬಂದಿಗಳು ಮತ್ತು ನಗರಸಭಾ ಸದಸ್ಯರ ಜೊತೆಯಲ್ಲಿ ಹಬ್ಬವನ್ನ ಆಚರಿಸಿದ್ದು ಖುಷಿ ತಂದಿದೆ, ಮುಂದಿನ ಬಜೆಟ್ ನಲ್ಲಿ ದೊಡ್ಡಬಳ್ಳಾಪುರ ಜನತೆಗೆ ಮತ್ತಷ್ಟು ಖುಷಿ ವಿಚಾರಗಳನ್ನ ಕೊಡುವುದಾಗಿ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ಮಾತನಾಡಿ, ರಾಜಕೀಯವೇ ಜೀವನ ಅಲ್ಲ, ಗೆಲ್ಲುವ ತನಕ ಪಕ್ಷ ಗೆದ್ದ ನಂತರ ನಾವೇಲ್ಲ ನಗರದ ಅಭಿವೃದ್ಧಿಗಾಗಿ ದುಡಿಯ ಬೇಕು, ಸಂಕ್ರಾಂತಿ ಹಬ್ಬವನ್ನ ಆಚರಣೆಯ ಮೂಲಕ ದೊಡ್ಡಬಳ್ಳಾಪುರ ನಗರಸಭೆಗೆ ಸರ್ಕಾರದಿಂದ ಅನುದಾನ ಹರಿದು ಬರಲಿ ಮತ್ತಷ್ಟು ಪ್ರಗತಿ ಆಗಲಿ ಎಂಬುದೇ ನಮ್ಮ ಅಶಯವಾಗಿದೆ ಎಂದರು

Edited By : Ashok M
PublicNext

PublicNext

14/01/2025 08:23 am

Cinque Terre

25.78 K

Cinque Terre

0